ಪ್ರಧಾನಿ ಬೆಂಗ್ಳೂರಿಗೆ ಬರ್ತಿದಾರೆ,ದಾರಿಬಿಡಿ

ಬೆಂಗಳೂರು, ಡಿ. 2: ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಅವರು ಡಿಸೆಂಬರ್ 3 ರ ಬುಧವಾರದಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ವಿಜ್ಞಾನ ಮತ್ತು ಭಾರತೀಯ ವಿಜ್ಞಾನಿಗಳಿಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಅವರ ಕರ್ನಾಟಕ ಪ್ರವಾಸ ಒಂದುದಿನದ್ದಾಗಿರುತ್ತದೆ.

ಬುಧವಾರ ಬೆಳಗ್ಗೆ 11-15 ಕ್ಕೆ ಪ್ರಧಾನಿಗಳು ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಾರೆ. ಅದೇ ದಿವಸ ಸಂಜೆ 5.00 ಕ್ಕೆ ಅವರು ಇದೇ ವಾಯು ನಿಲ್ದಾಣದಿಂದ ಬೆಂಗಳೂರಿನಿಂದ ನಿರ್ಗಮಿಸಲಿದ್ದಾರೆ.ಎಚ್ ಎಎಲ್ ನಿಲ್ದಾಣದಿಂದ ಪ್ರಧಾನಿಗಳು ನೆರವಾಗಿ ಜಕ್ಕೂರಿಗೆ ತೆರಳುತ್ತಾರೆ. ಜಕ್ಕೂರಿನಲ್ಲಿರುವ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ ಸ್ಡ್ ಸೈನ್ಟಿಫಿಕ್ ರಿಸರ್ಚ್ ಆವರಣದಲ್ಲಿ ಜರಗುವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಮೆಟೀರಿಯಲ್ ಸೈನ್ಸ್ (ICMS )ಕೇಂದ್ರವನ್ನು ದೇಶಕ್ಕೆ ಅರ್ಪಿಸುವುದು ಮತ್ತು ಸಿಎನ್ ಆರ್ ರಾವ್ ವಿಜ್ಞಾನ ಸಭಾಂಗಣದ ಉದ್ಘಾಟನೆಯನ್ನು ಪ್ರಧಾನಿಗಳು ಮಧ್ಯಾನ್ಹ 12 ಗಂಟೆಗೆ ನೆರವೇರಿಸಲಿದ್ದಾರೆ.ಈ ಕಾರ್ಯಕ್ರಮಗಳಲ್ಲಿ ಕರ್ನಾಟಕ ರಾಜ್ಯಪಲ ರಾಮೇಶ್ವರ ಠಾಕೂರ್ ಮತ್ತು ಮುಖ್ಯಮಂತ್ರಿ ಬಿ.ಎಸ್ ಯಡ್ಯೂರಪ್ಪ ಭಾಗವಹಿಸಲಿದ್ದಾರೆ.

( ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+