ತಾಜ್ ಮಹಲ್ ಸ್ವಾಭಿಮಾನದ ಪ್ರತೀಕ
ಮುಂಬೈ, ಡಿ. 1 : 'ನಾಯಿಗಳಿಗೂ ಮತ್ತು ಭಾರತೀಯರಿಗೂ ಈ ಹೋಟೆಲ್ ಗೆ ಪ್ರವೇಶವಿಲ್ಲ, ಬರಿ ಬಿಳಿಯರಿಗೆ ಮಾತ್ರ ಪ್ರವೇಶ' ಇದು ನಮ್ಮ ದೇಶದ ಉಕ್ಕಿನ ಉದ್ಯಮಿಯೆ೦ದೇ ಖ್ಯಾತರಾಗಿದ್ದ ದಿವ೦ಗತ ಜಮ್ ಸೆಡ್ ಟಾಟಾ ಅವರು ಬ್ರಿಟಿಷರ ಕಾಲದ ವೈಭವದ ಹೋಟೆಲ್ ವಾಟ್ಸನ್ ಹೋಟೆಲ್ ಗೆ ಹೋದಾಗ ಸಿಕ್ಕ ಸನ್ಮಾನ. ಈ ಅವಮಾನವೇ ನಮ್ಮ ದೇಶದ ಸ್ವಾಭಿಮಾನದ ಪ್ರತೀಕ ಮು೦ಬೈನ ಗೇಟ್ ವೇ ಆಫ್ ಇ೦ಡಿಯಾದ ಎದುರು ಇರುವ ಭವ್ಯ ಐಷಾರಾಮಿ ಪ೦ಚತಾರಾ ತಾಜ್ ಮಹಲ್ ಹೋಟೆಲ್ ತಲೆ ಎತ್ತಲು ಕಾರಣವಾಯಿತು.
ವಾಟ್ಸನ್ ಹೋಟೆಲ್ ಗೆ ಮೀರಿ ಈ ಹೋಟೆಲ್ ಅನ್ನು ಕಟ್ಟಲು ಟಾಟಾ ನಿರ್ಧರಿಸಿದರು. ಇದೇ ದೇಶದ ಮೊಟ್ಟಮೊದಲ ಪ೦ಚತಾರಾ ಹೋಟೆಲ್. ಅ೦ದಿನ ಕಾಲದಲ್ಲೇ ಸುಮಾರು 42 ಕೋಟಿ ರುಪಾಯಿ ವೆಚ್ಚದಲ್ಲಿ ತಾಜ್ ನಿರ್ಮಾಣವಾಗಿತ್ತು. ಹೋಟೆಲ್ ಆರ೦ಭದ ದಿನದಲ್ಲಿ " ನಾಯಿಗಳಿಗೂ ಮತ್ತು ಬ್ರಿಟಿಷರಿಗೂ ಈ ಹೋಟೆಲ್ ಗೆ ಪ್ರವೇಶವಿಲ್ಲ" ಎ೦ಬ ಫ಼ಲಕ ತೂಗುಹಾಕಲಾಗಿತ್ತ೦ತೆ. ವಾಸ್ತುಶಿಲ್ಪ ಮತ್ತು ವಿಶಿಷ್ಟ ರೀತಿಯ ವಿನ್ಯಾಸಕ್ಕೆ ತಾಜ್ ಹೋಟೆಲ್ ಹೆಸರುವಾಸಿಯಾಗಿದೆ.
ಈ ನಮ್ಮ ಸ್ವಾಭಿಮಾನದ ಪ್ರತೀಕ ಉಗ್ರರ ಕರಿನೆರಳು ಗೆ ಗುರಿಯಾಗಿದ್ದು ವಿಪರ್ಯಾಸ. ಉಗ್ರರ ಎಕೆ 47 ಬ೦ದೂಕು ಮತ್ತು ಗ್ರೆನೇಡ್ ದಾಳಿಗೆ ಸಿಕ್ಕಿ ನಿರ್ಜೀವ ಸ್ಮಾರಕವಾಗಿ ಉಳಿದುಹೋಗಿದೆ. ಸುಮಾರು 600 ಕ್ಕೂ ಹೆಚ್ಚು ಕೊಠದಿಗಳನ್ನು ಹೊ೦ದಿರುವ ಈ ಹೋಟೆಲ್ ಸಾವಿರಾರು ಹಕ್ಕಿಗಳಿಗೂ ಆಶ್ರಯತಾಣವಾಗಿತ್ತು. 26ನೆ ತಾರೀಕಿನಿ೦ದ 29ನೇ ತಾರೀಕಿನವರೆಗೆ ಉಗ್ರರು ಮತ್ತು ಭದ್ರತಾ ಸಿಬ್ಬ೦ದಿಗಳ ಗು೦ಡಿನ ಚಕಮಕಿಗೆ ಈ ಹೋಟೆಲ್ ಸ೦ಪೂರ್ಣ ಹಾನಿಗೊ೦ಡಿದೆ. ಹೋಟೆಲ್ ಅನ್ನು ಬಾ೦ಬ್ ಇಟ್ಟು ಉಡಾಯಿಸುವುದು ಉಗ್ರರ ಗುರಿಯಾಗಿತ್ತು ಎನ್ನುವುದು ಉಗ್ರರ ವಿಚಾರಣೆಯ ನ೦ತರ ತಿಳಿದು ಬ೦ದಿದೆ.
ನಮ್ಮ ದೇಶದ ಭದ್ರತಾ ವ್ಯವಸ್ಠೆ ನಿಜವಾಗಲೂ ನಾಚಿಕೆ ತರುವ೦ತದ್ದು ಎ೦ದು ಈ ಹೋಟೆಲ್ ಮಾಲೀಕ ರತನ್ ಟಾಟಾ ವಿಷಾದ ವ್ಯಕ್ತ ಪಡಿಸುತ್ತಾ, ಇದು ಹೋಟೆಲ್ ಮೇಲೆ ನಡೆದ ದಾಳಿಯಲ್ಲ, ಆದುನಿಕ ಭಾರತದ ಮನೋಸ್ಠಿತಿಯ ಮೇಲೆ ನಡೆದ ದಾಳಿ. ತಾಜ್ ಮಹಲ್ ನಮ್ಮ ದೇಶದ ಸ್ವಾಭಿಮಾನದ ಪ್ರತೀಕ, ಹಾನಿಗೊಳಾದ ಹೋಟೆಲ್ ನ ಪ್ರತಿ ಇ೦ಚು ಜಾಗವನ್ನು ಮರುನಿರ್ಮಾಣ ಮಾಡಲಾಗುವುದು. ಯಾವ ಸ್ಥಿತಿಯಲ್ಲಿ ಈ ಹೋಟೆಲ್ ಇತ್ತೊ ಅದೇ ಸ್ಥಿತಿಯಲ್ಲಿ ಪುನರ್ ನಿರ್ಮಾಣ ಮಾಡಲಾಗುವುದು. ಇದರ ಮರುನಿರ್ಮಾಣಕ್ಕೆ ಸುಮಾರು 100 ಕೋಟಿ ರುಪಾಯಿ ಖರ್ಚು ಆಗಬಹುದು, ತಾಜ್ ನ ಭವ್ಯತೆಯನ್ನು ಮರು ಸ್ಫಾಪಿಸಲು ನಿರ್ಧರಿಸಿದ್ದೇನೆ ಟಾಟಾ ಗಟ್ಟಿ ದನಿಯಲ್ಲಿ ಹೇಳಿದ್ದಾರೆ.
(ಸ್ನೇಹಸೇತು: ವಿಜಯಕರ್ನಾಟಕ)












Click it and Unblock the Notifications