ಕೈಗಾರಿಕೋದ್ಯಮಿಗಳ ಜೊತೆ ಆಡ್ವಾಣಿ ಮಾತುಕತೆ
ನವದೆಹಲಿ, ನ. 21 : ಬಿಜೆಪಿ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿರುವ ಎಲ್.ಕೆ.ಆಡ್ವಾಣಿ ಪ್ರಮುಖ ಕೈಗಾರಿಕೋದ್ಯಮಿಗಳ ಜೊತೆ ದೇಶದ ಪ್ರಸಕ್ತ ಆರ್ಥಿಕ ವ್ಯವಸ್ಥೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಜಾಗತಿಕ ಮಟ್ಟದಲ್ಲೂ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವುದರಿಂದ ಕೇಂದ್ರ ಸರಕಾರ ತೆಗೆದು ಕೊಂಡಿರುವ ಕ್ರಮದ ಬಗ್ಗೆ ಕೂಡ ಚರ್ಚೆ ನಡೆಸಿದರು. ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಯಶವಂತ್ ಸಿನ್ಹ ಮತ್ತು ಜಸ್ವಂತ್ ಸಿಂಗ್ ಭಾಗವಹಿಸಿದ್ದರು.
ಅಡ್ವಾಣಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಹೋದರರಾದ ರಿಲಯನ್ಸ ಸಂಸ್ಥೆಯ ಮುಖೇಶ್ ಮತ್ತು ಅನಿಲ್ ಅಂಬಾನಿ, ಭಾರ್ತಿ ಸಂಸ್ಥೆಯ ಮುಖ್ಯಸ್ಥ ಸುನಿಲ್ ಮಿತ್ತಲ್, ಐಸಿಐಸಿಐ ಮುಖ್ಯಸ್ಥ ಎಂ.ವಿ. ಕಾಮತ್, ಎಸ್ಸಾರ್ ಸಂಸ್ಥೆಯ ಮುಖ್ಯಸ್ಥ ಶಶಿ ರುಯಾ, ಬಜಾಜ್ ಆಟೋ ಮುಖ್ಯಸ್ಥ ರಾಹುಲ್ ಬಜಾಜ್ ಸೇರಿದಂತೆ 15 ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು. ಸಣ್ಣ ಕೈಗಾರಿಕೆಗಳ ಮುಖ್ಯಸ್ಥರ ಜೊತೆ ಕೂಡ ಆಡ್ವಾಣಿ ಮಾತುಕತೆ ನಡೆಸಲಿದ್ದಾರೆ ಎಂದು ಯಶವಂತ್ ಸಿನ್ಹ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications