ಇಂಗ್ಲೆಂಡ್ ಟೀಂಗೆ ಧನಾತ್ಮಕ ಬೆಳಕಿನ ಕೊರತೆ
ಕಾನ್ಪುರ, ನ. 21 : ಬೆಳಕಿನ ಕೊರತೆಯ ಹಿನ್ನೆಲೆಯಲ್ಲಿ ಇಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಪಂದ್ಯವನ್ನು ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ 16 ರನ್ ಗಳಿಂದ ಜಯಗಳಿಸಿತು. ಈ ಮೂಲಕ ಸರಣಿಯಲ್ಲಿ 3-0 ದಿಂದ ಮುನ್ನೆಡೆ ಪಡೆಯುವುದರೊಂದಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ಅತಿಥೇಯ ಇಂಗ್ಲಂಡ್ ತಂಡ ಹವಾಮಾನ ವೈಪರಿತ್ಯದಿಂದ ಪಂದ್ಯವನ್ನು 49 ಓವರ್ ಗಳಿಗೆ ಸಿಮೀತಗೊಳಿಸಲಾಯಿತು. ನಿಗದಿತ ಓವರಿನಲ್ಲಿ ಇಂಗ್ಲೆಂಡ್ ತಂಡ 241 ರನ್ ಸಾಧಾರಣ ಮೊತ್ತ ಗಳಿಸಲು ಸಫಲವಾಯಿತು. ಇಂಗ್ಲಿಷರ ಪರ ರವಿ ಬೊಪರಾ 60, ಇಯಾನ್ ಬೆಲ್ 46, ಓಯಿಸ್ 40, ಸಮೀತ್ ಪಟೇಲ್ 26 ಮಾತ್ರ ಎರಡಂಕಿ ದಾಟಲು ಸಾಧ್ಯವಾಯಿತು. ಪ್ರಮುಖ ಆಟಗಾರರು ಇಂದು ಮತ್ತೆ ಕೈಕೊಟ್ಟಿದ್ದರಿಂದ ಇಂಗ್ಲೆಂಡ್ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣವಾಯಿತು. ಹರ್ಭಜನ್ ಸಿಂಗ್ ಮೂರು, ಮುನಾಫ್ ಪಟೇಲ್, ಇಶಾಂತ್ ಶರ್ಮಾ ತಲಾ ಎರಡೆರಡು ವಿಕೆಟ್ ಪಡೆದರು.
ಭಾರತ ಆರಂಭದಲ್ಲಿ ಕುಸಿತ ಕಂಡು ಆಘಾತ ಎದುರಿಸಿತು. ನಂತರ ಪರ ಉಪನಾಯಕ ವೀರೇಂದ್ರ ಸೆಹ್ವಾಗ್ ಅಕರ್ಷಕ ಅರ್ಧ ಶತಕ 68, ಜಹೀರ್ ಖಾನ್ 40, ರೋಹಿತ್ ಶರ್ಮಾ 28, ಯುವರಾಜ್ ಸಿಂಗ್ 38, ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 29 ರನ್ ಗಳ ಮೂಲಕ 5 ವಿಕೆಟ್ ನಷ್ಟಕ್ಕೆ 198 ಆಗಿದ್ದಾಗ ಬೆಳಕಿನ ಆಭಾವದಿಂದ ಪಂದ್ಯ ನಿಲ್ಲಿಸಲಾಯಿತು. ಡಕ್ ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಗೆಲುವು ಸಾಧಿಸಿದೆ ಎಂದು ಅಂಪೈರ್ ಘೋಷಿಸಿದರು. ಮೂರು ವಿಕೆಟ್ ಗಳಿಸಿದ್ದ ಭಾರತದ ಹರ್ಭಜನ್ ಸಿಂಗ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications