ಪಹಣಿ ತಿದ್ದುಪಡಿಗೆ ಸುವರ್ಣ ಅವಕಾಶ

ಮಡಿಕೇರಿ. ನ. 20 ರಾಜ್ಯ ಸರ್ಕಾರ ಗಣಕಯಂತ್ರವನ್ನು ಅಳವಡಿಸಿಕೊಳ್ಳುವಲ್ಲಿ ಇತರ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇದರ ಪರಿಣಾಮವಾಗಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿಯೂ ಗಣಕಯಂತ್ರವನ್ನು ಬಳಸುವ ಮೂಲಕ ವರಮಾನ, ವಾಸಸ್ಥಳ, ದೃಢೀಕರಣ ಪತ್ರಗಳು, ಜಮೀನು ಹಕ್ಕು ದಾಖಲೆ, ಪಹಣಿ ಪತ್ರ, ನ್ಯಾಯಾಲಯ, ಬ್ಯಾಂಕ್, ಸಹಕಾರ ಸಂಘಗಳ ವ್ಯವಹಾರ ಮೊದಲಾದ ಎಲ್ಲಾ ರಂಗಗಳಲ್ಲೂ ಸಾರ್ವಜನಿಕರಿಗೆ ಮಾಹಿತಿ, ಸೇವೆ, ದಾಖಲೆಗಳನ್ನು ಒದಗಿಸುವ ಕಾರ್ಯ ಚುರುಕಾಗಿದೆ.

ಈ ನಿಟ್ಟಿನಲ್ಲಿ ಭೂ ದಾಖಲೆಗಳ ಗಣಕೀಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಭೂಮಿ ಯೋಜನೆಯನ್ನು ಈಗಾಗಲೇ ಜಾರಿಗೊಳಿಸಿದ್ದು ಭೂಮಿಯ ಪಹಣಿ(ಆರ್.ಟಿ.ಸಿ.)ಯನ್ನು ಸಹ ಗಣಕಯಂತ್ರಕ್ಕೆ ಅಳವಡಿಸಿದೆ. ಸದ್ಯ ಪಹಣಿಯಲ್ಲಿನ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು 2009 ಮಾರ್ಚ್ 31ರ ವರೆಗೆ ಸರ್ಕಾರ ನಾಗರಿಕರಿಗೆ ಅವಕಾಶ ಕಲ್ಪಿಸಿದ್ದು, ಕೊಡಗು ಜಿಲ್ಲೆಯ ಜಮೀನು ಮಾಲೀಕರು ಭೂಮಿ ಪಹಣಿಯ ಲೋಪಗಳನ್ನು ಸರಿಪಡಿಸಿಕೊಳ್ಳಬೇಕೆಂದು ಉಪ ವಿಭಾಗಾಧಿಕಾರಿ ಅಕ್ರಂಪಾಷ ತಿಳಿಸಿದ್ದಾರೆ.

ಪಹಣಿಯ ಪತ್ರಿಕೆಯ ಲೋಪದೋಷಗಳನ್ನು ಸರಿಪಡಿಸುವುದರಲ್ಲಿ ಉಂಟಾಗುತ್ತಿರುವ ವಿಳಂಬ ಮತ್ತು ಇದರಿಂದ ನಾಗರಿಕರಿಗೆ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಕಂದಾಯ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಭಾಗ ಮಟ್ಟದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಬಾಕಿ ಉಳಿದಿರುವ ಪಹಣಿ ತಂತ್ರಾಂಶಗಳನ್ನು ಆದ್ಯತೆ ಮೇರೆಗೆ ಸರಿಪಡಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+