ಗ್ರಾಹಕರ ನ್ಯಾಯಾಲಯ :ನೋಕಿಯಾಗೆ ದಂಡ

ಕಲ್ಬುರ್ಗಿ, ನ.20: ಗುಲಬರ್ಗಾ ಸೂಪರ್ ಮಾರ್ಕೆಟ್ ನ ಸಿಂಫೋನಿ ಹೌಸ್ ಆಫ್ ಮ್ಯೂಜಿಕ್, ಬಾಲಾಜಿ ಕೇರ್ ಸೆಂಟರ್ ಮತ್ತು ನವದೆಹಲಿಯ ನೋಕಿಯಾ ಕಂಪನಿಯವರು ಜಂಟಿಯಾಗಿ 7800 ರೂ.ಗಳ ಪರಿಹಾರವನ್ನು ಗುಲಬರ್ಗಾದ ಮಾಕಾ ಲೇಔಟ್ ನಿವಾಸಿ ರುದ್ರಸ್ವಾಮಿ ಸ್ಥಾವರಮಠ ಅವರಿಗೆ ಪಾವತಿಸುವಂತೆ ಗುಲಬರ್ಗಾ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

ಫೀರ್ಯಾದುದಾರ ರುದ್ರಸ್ವಾಮಿ ಸ್ಥಾವರಮಠ ಅವರು ಗುಲಬರ್ಗಾ ಸಿಂಫೋನಿ ಹೌಸ್ ಆಫ್ ಮ್ಯೂಜಿಕ್‌ನಲ್ಲಿ 7800 ರೂ. ಪಾವತಿಸಿ ನೋಕಿಯಾ-3230 ಮೊಬೈಲ್ ಸೆಟ್ಟನ್ನು 14/5/2007 ರಂದು ಖರೀದಿಸಿದ್ದರು. ಆರು ತಿಂಗಳ ನಂತರ ಈ ಸೆಟ್ಟು ತನ್ನಿಂತಾನೆ ಸ್ವಿಚ್ ಆಫ್ ಆಗುತ್ತಿತ್ತು ಹಾಗೂ ಕೀಪ್ಯಾಡ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.

ಇದರಿಂದ ಫಿರ್ಯಾದುದಾರ ಸಿಂಫೋನಿ ಹೌಸ್ ಆಫ್ ಮ್ಯೂಜಿಕ್ ಅಂಗಡಿಗೆ ಹೋಗಿ ರಿಪೇರಿ ಮಾಡಲು ಕೋರಿದಾಗ ಬಾಲಾಜಿ ಕೇರ್ ಸೆಂಟರಿನಲ್ಲಿ ರಿಪೇರಿ ಮಾಡಿಸಲು ಹೇಳಿದಂತೆ ರಿಪೇರಿ ಮಾಡಿದರೂ 15 ದಿನಗಳ ಬಳಿಕ ಅದೇ ಸಮಸ್ಯೆ ಪುನಃ ಪ್ರಾರಂಭವಾಯಿತು. ರುದ್ರಸ್ವಾಮಿ ಅವರು ಸದರಿ ಮೊಬೈಲ್ ಬೆಲೆ 7800 ರೂ. ನೀಡಲು ಅಥವಾ ಅದೇ ಮೌಲ್ಯದ ಸೆಟ್ ನೀಡಲು ಕೋರಿದರು. ಆದರೆ ಎರಡೂ ಅಂಗಡಿಯವರು ನೋಕಿಯಾ ಕಂಪನಿಯೇ ಜವಾಬ್ದಾರವೆಂದು ಹೇಳಿದ ಕಾರಣ ಈ ಮೂವರ ವಿರುದ್ಧ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ 14300ರೂ. ಪರಿಹಾರವನ್ನು ಶೇ. 12ರ ಬಡ್ಡಿಯಂತೆ ನೀಡಲು ಆದೇಶಿಸುವಂತೆ ಕೋರಿ ದೂರು ಸಲ್ಲಿಸಿದ್ದರು.

ಜಿಲ್ಲಾ ಗ್ರಾಹಕರ ನ್ಯಾಯಾಲಯದ ಅಧ್ಯಕ್ಷ ಶಿವಾನಂದ ಕಟ್ಟಿ, ಸದಸ್ಯರಾದ ಗೋಪೆಮ್ಮ ,ವಿ.ಎಸ್. ಎಕ್ಕೆಳ್ಳಿ ಅವರು ಸಾಕ್ಷಿ ಮತ್ತು ಎಲ್ಲ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ 7800 ರೂ. ಪರಿಹಾರವನ್ನು ನೀಡುವಂತೆ ಆದೇಶ ಹೊರಡಿಸಿದ್ದಾರೆ. ಫಿರ್ಯಾದಿಯ ಪರ ವಕೀಲ ವೈಜನಾಥ ಝಳಕಿ ಹಾಗೂ ಅಂಗಡಿಗಳ ಮತ್ತು ಕಂಪನಿಯ ಪರ ಸುಭಾಷ ಕಿಣಗಿ, ಅನುರಾಧಾ ದೇಸಾಯಿ ಅವರು ವಾದ ಮಂಡಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+