ಕ್ರಿಕೆಟ್ :ಯುವರಾಜ್ ಸಿಂಗ್ ಆಕರ್ಷಕ 138

ರಾಜ್ ಕೋಟ್, ನ. 14 : ಆಸೀಸ್ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿ ವಿಶ್ವಾಸದಿಂದ ಬಿಗುತ್ತಿರುವ ಧೋನಿ ಪಡೆ, ಇಲ್ಲಿನ ಮಾಧವ್ ರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆದಿರುವ ಇಂಗ್ಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತೀಯ ತಂಡ ನಿಗದಿತ 50 ಓವರಿನಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳ ಭಾರಿ ಮೊತ್ತವನ್ನು ಕೂಡಿಹಾಕಿದೆ.

ಭಾರತದ ಪರ ಯುವರಾಜ್ ಸಿಂಗ್ ಕೇವಲ 78 ಎಸೆತಗಳಲ್ಲಿ ಅಜೇಯ ಭರ್ಜರಿ 138 ರನ್ ಶತಕ ಗಳಿಸಿರುವುದು ಇಂದಿನ ವಿಶೇಷತೆ. ಆರಂಭಿಕರಾದ ವೀರೇಂದ್ರ ಸೆಹ್ವಾಗ್(85) ಹಾಗೂ ಗೌತಮ್ ಗಂಭೀರ (51) ಅವರ ಉತ್ತಮ ಆಟದ ನೆರವಿನಿಂದ ತಂಡದ ಮೊತ್ತಕ್ಕೆ ಭದ್ರ ಆಡಿಪಾಯ ದೊರೆಯಿತು. ಸುರೇಶ್ ರೈನಾ (43), ಮಹೇಂದ್ರ ಸಿಂಗ್ ಧೋನಿ (39) ಹಾಗೂ ರೋಹಿತ್ ಶರ್ಮಾ (9) ಉತ್ತಮ ಪ್ರದರ್ಶನ ನೀಡಿದರು.

ಸೆಹ್ವಾಗ್ ಅಂತೂ ಇಂಗ್ಲಿಷ್ ಬೌಲರ್ ಗಳನ್ನು ದಾಳಿಯನ್ನು ಮನಬಂದಂತೆ ದಂಡಿಸಿದರು. ನಂತರ ಬಂದ ಯುವರಾಜ್ ಸಿಂಗ್ ಅಬ್ಬರಕ್ಕೆ ಆಂಗ್ಲ ಬೌಲರ್ ಗಳ ಅಕ್ಷರಶಃ ನಲುಗಿ ಹೋದರು. ಹರ್ಮಿಸನ್, ಅಂಡರ್ ಸನ್, ಪ್ಲಿಂಟಾಫ್, ಪೀಟರ್ ಸನ್, ಶಮಿತ್ ಪಟೇಲ್, ಪಾಲ್ ಕಾಲಿಂಗ್ ವುಡ್, ಸ್ಟೀವ್ ಬೋರ್ಡ್ ಅವರ ದಾಳಿಯನ್ನು ಪುಡಿಗಟ್ಟಿಸಿದ ಯುವರಾಜ್ ಸಿಂಗ್ 16 ಬೌಂಡರಿ ಬೌಂಡರಿ ಹಾಗೂ 6 ಸಿಕ್ಸರ್ ಗಳನ್ನು ಕೇವಲ 78 ಎಸೆತಗಳಲ್ಲಿ ಬಾರಿಸುವುದರ ಮೂಲಕ ಏಕದಿನ ಪಂದ್ಯದಲ್ಲಿ ಒಂಬತ್ತನೇ ಶತಕವನ್ನು ದಾಖಲಿಸಿದರು.
(ದಟ್ಸ್ ಕನ್ನಡ ಕ್ರೀಡಾ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+