ಭಾರತಕ್ಕೆ 158 ರನ್ ಗಳ ಭರ್ಜರಿ ಜಯ
ರಾಜ್ ಕೋಟ್, ನ. 14 : ಇಲ್ಲಿಯ ಮಾಧವ ರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ 158 ರನ್ ಭರ್ಜರಿ ಜಯ ದಾಖಲಿಸಿತು. ನಿರೀಕ್ಷೆಯಂತೆ ಆಕರ್ಷಕ ಶತಕ ಬಾರಿಸಿದ್ದ ಯುವರಾಜ್ ಸಿಂಗ್ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು.
ಇಂದು ಬೆಳಗ್ಗೆ ಟಾಸ್ ಸೋತು ಬ್ಯಾಟಿಂಗ್ ಆಯ್ದಕೊಂಡ ಭಾರತ, 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿತ್ತು. ಬೃಹತ್ ಮೊತ್ತ ಬೆನ್ನಟ್ಟಿದ್ದ ಇಂಗ್ಲಿಷ್ ಪಡೆ ಭಾರತದ ದಾಳಿ ಎದುರಿಸಲಾಗದೆ 229 ಕ್ಕೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಸೋಲನುಭವಿಸಿತು.
ಭಾರತದ ಪರ ಯುವರಾಜ್ ಸಿಂಗ್ ಕೇವಲ 78 ಎಸೆತಗಳಲ್ಲಿ ಅಜೇಯ ಭರ್ಜರಿ 138 ರನ್ ಶತಕ ಗಳಿಸಿರುವುದು ಇಂದಿನ ವಿಶೇಷತೆ. ಆರಂಭಿಕರಾದ ವೀರೇಂದ್ರ ಸೆಹ್ವಾಗ್(85) ಹಾಗೂ ಗೌತಮ್ ಗಂಭೀರ (51) ಅವರ ಉತ್ತಮ ಆಟದ ನೆರವಿನಿಂದ ತಂಡದ ಮೊತ್ತಕ್ಕೆ ಭದ್ರ ಆಡಿಪಾಯ ದೊರೆಯಿತು. ಸುರೇಶ್ ರೈನಾ (43), ಮಹೇಂದ್ರ ಸಿಂಗ್ ಧೋನಿ (39) ಹಾಗೂ ರೋಹಿತ್ ಶರ್ಮಾ (9) ಉತ್ತಮ ಪ್ರದರ್ಶನ ನೀಡಿದರು.
ಸೆಹ್ವಾಗ್ ಅಂತೂ ಇಂಗ್ಲಿಷ್ ಬೌಲರ್ ಗಳನ್ನು ದಾಳಿಯನ್ನು ಮನಬಂದಂತೆ ದಂಡಿಸಿದರು. ನಂತರ ಬಂದ ಯುವರಾಜ್ ಸಿಂಗ್ ಅಬ್ಬರಕ್ಕೆ ಆಂಗ್ಲ ಬೌಲರ್ ಗಳ ಅಕ್ಷರಶಃ ತಲುಗಿ ಹೋದರು. ಹರ್ಮಿಸನ್, ಅಂಡರ್ ಸನ್, ಪ್ಲಿಂಟಾಫ್, ಪೀಟರ್ ಸನ್, ಶಮಿತ್ ಪಟೇಲ್, ಪಾಲ್ ಕಾಲಿಂಗ್ ವುಡ್, ಸ್ಟೀವ್ ಬೋರ್ಡ್ ಅವರ ದಾಳಿಯನ್ನು ಪುಡಿಗಟ್ಟಿಸಿದ ಯುವರಾಜ್ ಸಿಂಗ್ 16 ಬೌಂಡರಿ ಬೌಂಡರಿ ಹಾಗೂ 6 ಸಿಕ್ಸರ್ ಗಳನ್ನು ಕೇವಲ 78 ಎಸೆತಗಳಲ್ಲಿ ಬಾರಿಸುವುದರ ಮೂಲಕ ಏಕದಿನ ಪಂದ್ಯದಲ್ಲಿ ಒಂಬತ್ತನೇ ಶತಕವನ್ನು ದಾಖಲಿಸಿದರು.
(ದಟ್ಸ್ ಕನ್ನಡ ಕ್ರೀಡಾ ವಾರ್ತೆ)












Click it and Unblock the Notifications