ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೊದ್ದಂ ನರಸಿಂಹಗೆ ಟ್ರೀಸ್ಟಿ ವಿಜ್ಞಾನ ಪ್ರಶಸ್ತಿ

By Staff
|
Google Oneindia Kannada News

physicist Roddam Narasimha, img:www.jancasr.ac.inಇಟಲಿ, ಅ. 20 : ಭೌತಶಾಸ್ತ್ರ ವಿಭಾಗದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಭಾರತೀಯ ಮೂಲದ ಹೆಸರಾಂತ ಭೌತಶಾಸ್ತ್ರಜ್ಞ ರೊದ್ದಂ ನರಸಿಂಹ ಅವರಿಗೆ 2008ರ ಸಾಲಿನ ಇಟಲಿಯ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ 'ಟ್ರೀಸ್ಟಿ ವಿಜ್ಞಾನ ಪ್ರಶಸ್ತಿ'ಯನ್ನು ಕೊಡಮಾಡಲಾಗಿದೆ. ಟ್ರೀಸ್ಟಿ ವಿಜ್ಞಾನ ಪ್ರಶಸ್ತಿಯು 1 ಲಕ್ಷ ಅಮೆರಿಕನ್ ಡಾಲರ್ ಹಾಗೂ ಪ್ರಶಸ್ತಿ ಪದಕಗಳನ್ನು ಒಳಗೊಂಡಿರುತ್ತದೆ.

ಇಟಲಿಯ 'ದಿ ಅಕ್ಯಾಡಮಿ ಆಫ್ ಸೈನ್ಸ್ ಫಾರ್ ದಿ ಡೆವಲಪಿಂಗ್ ವರ್ಲಡ್' (TWAS) ಸಂಸ್ಥೆಯ ಪ್ರತಿ ವರ್ಷ ಭೌತ ವಿಜ್ಞಾನ ವಿಭಾಗದಲ್ಲಿ ಗಣಿನೀಯ ಸೇವೆ ಸಲ್ಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಅದರಂತೆ ಈ ಬಾರಿ "ಪ್ಲೂಯಿಡ್ ಡೈನಾಮಿಕ್ಸ್ ಹ್ಯಾಸ್ ಇನ್ ಕ್ರಿಸಿಜ್ಡ್ ಅವರ್ ಅಂಡರ್ ಸ್ಟ್ಯಾಂಡಿಂಗ್ ಆಫ್ ಟರ್ಬುಲನ್ಸ್" ವಿಷಯದಲ್ಲಿ ಮಾಡಿದ ಸಾಧನೆಯನ್ನು ಗುರುಸಿದ ಟಿಡಬ್ಲ್ಯುಎಎಸ್, 2008 ನೇ ಸಾಲಿನ ಟ್ರಿಸ್ಟಿ ವಿಜ್ಞಾನ ಪ್ರಶಸ್ತಿಗೆ ಭಾರತದ ರೊದ್ದಂ ನರಸಿಂಹ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದೆ. ಈ ಪ್ರಶಸ್ತಿ ಗಳಿಸಿರುವ ಮೊಟ್ಟಮೂದಲ ಭಾರತೀಯನೆಂಬ ಹೆಗ್ಗಳಿಕೆಗೆ ಕೂಡ ರೊದ್ದಂ ನರಸಿಂಹ ಭಾಜನರಾಗಿದ್ದಾರೆ.

'ಕೆಮಿಕಲ್ ಕಾಂಪೊಜಿಶನ್ ಆಫ್ ಸ್ಟಾರ್' ಎಂಬ ವಿಷಯದಲ್ಲಿ ವಿಶಿಷ್ಠ ಸಾಧನೆ ಮಾಡಿದ ಬ್ರೇಜಿಲ್ ನ ಆಸ್ಟ್ರೋ ಫಿಶಿಸಿಸ್ಟ್ ಬಿಟ್ರೀಜ್ ಬಾರ್ಬೂಯಿ ಕೂಡಾ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಮೊತ್ತವನ್ನು ರೊದ್ದಂ ಹಾಗೂ ಬಾರ್ಬೂಯಿ ಅವರಿಗೆ ಹಂಚಲಾಗುತ್ತದೆ. ಈ ಪ್ರಶಸ್ತಿಯನ್ನು ಇಟಲಿಯ ಅಧ್ಯಕ್ಷರು ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X