ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-1ರ ಅಂತಿಮ ಕ್ಷಣಗಣನೆ ಪ್ರಾರಂಭ

By Staff
|
Google Oneindia Kannada News

ಶ್ರೀಹರಿಕೋಟ, ಅ.20: ಚಂದ್ರಯಾನ-1ರ ಉಡಾವಣೆ ಅ.22ರಂದು ನೆರವೇರಲಿದ್ದು 52 ಗಂಟೆಗಳ ಕ್ಷಣಗಣನೆ ಸೋಮವಾರದಿಂದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪ್ರಾರಂಭವಾಯಿತು.

ಚಂದ್ರಯಾನ-1ರ ಉಡಾವಣೆಗೆ ಸಂಬಂಧಿಸಿದಂತೆ ಇಸ್ರೊ ಅಧ್ಯಕ್ಷ ಮಾಧವನ್ ನಾಯರ್ ಎಲ್ಲ ಅಂಶಗಳನ್ನು ಪರಿಶೀಲಿಸಲು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲೇ ತಂಗಿದ್ದಾರೆ. ಇಂದು ಮುಂಜಾನೆ 5.22 ಗಂಟೆಗೆ ಕ್ಷಣಗಣನೆ ಪ್ರಾರಂಭವಾಯಿತು. ತಾಂತ್ರಿಕ ಕಾರಣಗಳಿಂದ 3 ಗಂಟೆಗಳ ತಡವಾಗಿ ಕ್ಷಣಗಣನೆ ಆರಂಭವಾಗಿದ್ದಾಗಿ ಇಸ್ರೊ ಮೂಲಗಳು ತಿಳಿಸಿವೆ.

ನಿಗದಿಯಂತೆ ಅ.22ರಂದು ಮುಂಜಾನೆ 6.22 ಗಂಟೆಗೆ ಸರಿಯಾಗಿ ಪಿಎಸ್ ಎಲ್ ವಿ ಸಿ11 ರಾಕೆಟ್ ಚಂದ್ರಯಾನ-1 ಉಪಗ್ರಹವನ್ನು ಹೊತ್ತೊಯ್ಯಲಿದೆ ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ.

(ಯುಎನ್ ಐ)
ತಿಂಗಳ ಅಂತ್ಯಕ್ಕೆ ಮಾನವ ರಹಿತ ಚಂದ್ರಯಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X