ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಕರ್ನಾಟಕದ ಮೂಲಕ ಜನಸೇವೆ ನನ್ನ ಗುರಿ: ರೈ

By Staff
|
Google Oneindia Kannada News

ಬೆಂಗಳೂರು, ಅ.20: ಜಯಕರ್ನಾಟಕ ಸಂಘಟನೆ ಮೂಲಕ ಜನಸೇವೆ ಮಾಡುವುದು ನನ್ನ ಉದ್ದೇಶ. ಸಾರ್ವಜನಿಕರು ಇದಕ್ಕೆ ಅವಕಾಶ ಕಲ್ಪಿಸಬೇಕೆಂದು ಅಂದಿನ ಕಾಲದಡಾನ್ , ಇಂದಿನ ಸುಧಾರಕ ಮುತ್ತಪ್ಪ ರೈ ಘೋಷಣೆ ಮಾಡಿದ್ದಾರೆ.

ನಗರದ ದಕ್ಷಿಣ ವಲಯದಲ್ಲಿ 109 ಶಾಖೆಗಳ ಉದ್ಘಾಟನೆ ಸಮಯದಲ್ಲಿ ಈ ಮಾತುಗಳನ್ನಾಡಿದ ರೈ, ಕನ್ನಡ ನಾಡು ನುಡಿಯ ಅಭಿವೃದ್ಧಿ ನಮ್ಮ ಮೂಲ ಮಂತ್ರ ಎಂದರು. ಪ್ರಸ್ತುತ ಜಯಕರ್ನಾಟಕ ನಾಲ್ಕು ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ವರ್ಷ ಕಳೆಯುವ ಮೊದಲು ಒಂದು ಕೋಟಿ ಆಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಬೊಮ್ಮನಹಳ್ಳಿಯಿಂದ ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಆನೆಯ ಮೇಲೆ ಮೆರವಣಿಗೆ ಮೂಲಕ ಹೆಚ್ ಎಸ್ ಆರ್ ಲೇಔಟ್ 4 ಸೆಕ್ಟರ್ ಕಚೇರಿಗೆ ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ 3 ಅಂಬ್ಯುಲೆನ್ಸ್ ಹಾಗೂ ಒಂದು ಶವಸಂಸ್ಕಾರ ವಾಹನವನ್ನು ಉಚಿತ ಸೇವೆಗೆ ಬಿಡಲಾಯಿತು.

ಒಕ್ಕಲಿಗರ ಗುರು ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಹಿರಿಯ ನಟ ಕೆ.ಎಸ್. ಅಶ್ವಥ್ ಹಾಗೂ ಸಾಹಿತಿ ದೇ. ಜವರೇಗೌಡ ಈ ಶುಭ ಸಮಾರಂಭದಲ್ಲಿ ಉಪಸ್ಥಿತರಿದ್ದು, ನೆರೆದಿದ್ದವರಿಗೆ ಹಿತವಚನ ನೀಡಿದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡಲು ಹೋರಾಟ ಮಾಡುವ ಸಂಕಲ್ಪ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X