ಸಿಮಿ ನಿಷೇಧಕ್ಕೆ ಸಿದ್ಧ : ವೆಂಕಯ್ಯ ನಾಯ್ಡು

ತಿರುಪತಿ, ಸೆ. 29 : ನಮಗೆ ಅಧಿಕಾರ ನೀಡಿ ಖಂಡಿತವಾಗಿಯೂ ಭಯೋತ್ಪಾದನೆ ಧಮನಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಎಂ. ವೆಂಕಯ್ಯ ನಾಯ್ಡು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಮಿ ಸಂಘಟನೆಯನ್ನು ನಿಷೇಧಿಸುವುದು ನಮ್ಮ ಮೊದಲ ಅದ್ಯತೆ ಎಂದರು. ಕಳೆದ ಶನಿವಾರ ಸೆ .27 ರಂದು ಎರಡನೇ ಬಾರಿಗೆ ರಾಜಧಾನಿ ದೆಹಲಿಯಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ತೀವ್ರ ಖಂಡಿಸಿದ ಅವರು, ಇದೊಂದು ಹೇಯ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಯೋತ್ಪಾದನೆ ಉಪಟಳಕ್ಕೆ ತೀವ್ರಗೊಳ್ಳಲು ಕೇಂದ್ರ ಸರ್ಕಾರದ ಮೃದು ಧೋರಣೆಯೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.

ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟಗಳು ನಿರಂತರವಾಗಿ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಅಧಿಕಾರವೇ ಮುಖ್ಯವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಉಗ್ರರ ಅಟ್ಟಹಾಸವನ್ನು ತಡೆಯಲು ಮನಸ್ಸಿಲ್ಲ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಇಂದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದಕರ ಹಾಗೂ ಖಂಡನೀಯ ಎಂದು ಕಿಡಿಕಾರಿದರು.

ದೇಶದ ಆರ್ಥಿಕತೆಗೆ ಬಲವಾದ ಪೆಟ್ಟು ನೀಡುತ್ತಿರುವ ಉಗ್ರರ ಕೃತ್ಯಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಸಮಾಜದ ಸ್ವಾಥ್ಯ ಹಾಳು ಮಾಡುವ ಕೃತ್ಯದಲ್ಲಿ ನಿರತವಾಗಿರುವ ಉಗ್ರ ಸಂಘಟನೆಗಳ ನಿಗ್ರಹಕ್ಕೆ ನೂತನ ಕಾನೂನು ಅವಶ್ಯವಿದೆ ಎಂದು ಪ್ರತಿಪಾದಿಸಿದರು. ಕಾಂಗ್ರೆಸ್ ಪಕ್ಷದಿಂದ ದೇಶ ಅಧೋಗತಿಯತ್ತ ತೆರಳಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಜನಸಾಮಾನ್ಯರ ಬದುಕು ದುಸ್ತರವಾಗಲಿದೆ ಎಂದು ಕಳವಳಪಟ್ಟರು. ಆದ್ದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ ನೀಡಿ ಭಯೋತ್ಪಾದನೆಯನ್ನು ತೊಡೆದು ಹಾಕುತ್ತೇವೆ ಎಂದು ವೆಂಕಯ್ಯ ನಾಯ್ಡು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಅಹಮದಾಬಾದ್ ನಲ್ಲಿ 17 ನಾಡ ಬಾಂಬ್ ವಶ
ಸರಣಿಸ್ಫೋಟದ ರುವಾರಿ ಸಿಮಿ ಉಗ್ರ ಸೆರೆ
ದೆಹಲಿಯ ಲಘು ಸ್ಫೋಟಕ್ಕೆ ಐವರ ಬಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+