ದತ್ತಮಾಲಾ ಅಭಿಯಾನಕ್ಕೆ ಮಹೂರ್ತ ಸಿದ್ಧ

ಚಿಕ್ಕಮಗಳೂರು, ಸೆ.29: ಶ್ರೀರಾಮ ಸೇನೆ ಹಾಗೂ ಭಜರಂಗದಳದವರು ದತ್ತಮಾಲಾ ಅಭಿಯಾನ ಯಾತ್ರೆಯ ದಿನಾಂಕವನ್ನು ಪ್ರಕಟಿಸಿದ್ದಾರೆ. ಶ್ರೀರಾಮ ಸೇನೆ ನೇತೃತ್ವದಲ್ಲಿ ಅ.8 ರಿಂದ 14 ರವರೆಗೆ ದತ್ತಮಾಲಾ ಅಭಿಯಾನ ನಗರದಲ್ಲಿ ನಡೆಯಲಿದೆ.

ದತ್ತಭಕ್ತರು ಮಾಲೆ ಧರಿಸಿ, 14 ರಂದು ದತ್ತಪೀಠಕ್ಕೆ ಆಗಮಿಸಲಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ಗಂಗಾಧರ್ ಕುಲಕರ್ಣಿ ತಿಳಿಸಿದರು. ಮಾಲೆ ಧರಿಸಿದ 10 ಸಾವಿರಕ್ಕೂ ಅಧಿಕ ಮಂದಿ ಬಾಬಬುಡನ್ ಗಿರಿಯ ದತ್ತಪೀಠಕ್ಕೆ ಬರಲಿದ್ದಾರೆ. ಪೀಠದಲ್ಲಿ ನಡೆಯುವ ಮುಕ್ತಾಯ ಸಮಾರಂಭದಲ್ಲಿ ದತ್ತಪೀಠದ ಮುಕ್ತಿಗಾಗಿ ಕೆಲವು ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಬೇಡಿಕೆ ಈಡೇರಿಸುವಂತೆ ಶ್ರೀರಾಮಸೇನೆ ದತ್ತಮಾಲೆ ಅಭಿಮಾನದ ನಂತರ ಮುಖ್ಯಮಂತ್ರಿಗಳು, ಗೃಹಸಚಿವರು ಹಾಗೂ ಮುಜರಾಯಿ ಇಲಾಖೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಹೇಳಿದರು.

ಭಜರಂಗದ ಪ್ರತ್ಯೇಕ ಅಭಿಯಾನ
ಅಲ್ಪಸಂಖ್ಯಾತರನ್ನು ಓಲೈಸಿ ಹಿಂದು ಧರ್ಮದ ವಿರುದ್ಧ ಎತ್ತಿಕಟ್ಟುತ್ತಿರುವ ಜನಪ್ರತಿನಿಧಿಗಳಿಗೆ ದತ್ತಮಾಲಾ ಅಭಿಯಾನದಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಭಜರಂಗದಳದ ತಾಲೂಕು ಸಂಚಾಲಕಿ ಶಾಂತಿ ಹೇಳಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ನಿಗದಿಪಡಿಸಿದಂತೆ ಈ ಬಾರಿಯ ದತ್ತಮಾಲಾ ಅಭಿಯಾನ ಅ.13 ರಿಂದ ಅ.19 ರವರೆಗೆ ನಡೆಯಲಿದ್ದು, ಇದಕ್ಕೆ ಬೇಕಾದ ತಯಾರಿ ನಡೆಸಲಾಗುತ್ತಿದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಬಿಡುಗಡೆ ಭಾಗ್ಯ ಕಾಣದ ಭಜರಂಗಿ ಮಹೇಂದ್ರ
ಭಜರಂಗದಳದ ರಾಜ್ಯ ಸಂಚಾಲಕರ ಬಂಧನ
ಭಜರಂಗದಳ, ವಿಹಿಂಪ ನಿಷೇಧಕ್ಕೆ ಕಾಂಗ್ರೆಸ್ ಆಗ್ರಹ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+