ಯಾದಗಿರಿ ಜಿಲ್ಲಾಕೇಂದ್ರ ವಿರೋಧಿಸಿ ಶಹಾಪುರ ಬಂದ್
ಕಲಬುರ್ಗಿ, ಸೆ. 27 : ಕಲಬುರ್ಗಿಯನ್ನು ವಿಭಾಗಿಸಿ ರಚಿಸಲಾಗುವ ಹೊಸ ಜಿಲ್ಲೆಗೆ ಯಾದಗಿರಿಯನ್ನು ಕೇಂದ್ರ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ವಿರೋಧಿಸಿ ಇಂದು ಕರೆಯಲಾಗಿದ್ದ ಶಹಾಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
'ಶಹಾಪುರ ಜಿಲ್ಲಾ ಹೋರಾಟ ಸಮಿತಿ' ಯಾದಗಿರಿ ಬದಲು ಶಹಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಬಂದ್ ಕರೆ ನೀಡಿದ್ದವು. ಎಲ್ಲಾ ಅಂಗಡಿ ಮುಂಗಟ್ಟುಗಳು, ಸರ್ಕಾರಿ ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು ಮುಚ್ಚಲಾಗಿದ್ದವು. ಬಸ್ ಗಳು ಕೂಡ ರಸ್ತೆಗಿಳಿಯದೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದವು. ಕೆಲ ಅಹಿತಕರ ಘಟನೆ ನಡೆದುದು ಬಿಟ್ಟರೆ ಬಂದ್ ಹೆಚ್ಚೂ ಕಡಿಮೆ ಶಾಂತಿಯುತವಾಗಿತ್ತು.
ಕಲಬುರ್ಗಿ ದೊಡ್ಡ ಜಿಲ್ಲೆಯಾಗಿರುವುದರಿಂದ ಅಭಿವೃದ್ಧಿಯನ್ನು ಮನದಲ್ಲಿಟ್ಟುಕೊಂಡು ಕಲಬುರ್ಗಿಯನ್ನು ವಿಭಾಗಿಸಿ ರಾಜ್ಯದ 30ನೇ ಜಿಲ್ಲೆಗೆ ಯಾದಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಇಲ್ಲಿ ನಡೆದ ಸಂಪುಟ ಸಭೆಯಲ್ಲಿ ಘೋಷಿಸಿದ್ದರು. ಅಲ್ಲದೆ ಯಾದಗಿರಿ ಅಭಿವೃದ್ಧಿಗೆ 50 ಕೋಟಿ ರು. ಅನುದಾನ ನೀಡುವುದಾಗಿ ಹೇಳಿದ್ದರು.
ಮಾಜಿ ಸಚಿವ ಮತ್ತು ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅವರ ನೇತೃತ್ವದಲ್ಲಿ ಅವರ ಬೆಂಬಲಿಗರು ನಗರದಲ್ಲಿ ಪ್ರತಿಭಟನೆಯನ್ನು ನಡೆಸಿದರು.
(ಯುಎನ್ಐ)
ಪೂರಕ ಓದಿಗೆ
ಕಲ್ಯಾಣ ಕರ್ನಾಟಕಕ್ಕೆ ಬಂಪರ್ ಕೊಡುಗೆ












Click it and Unblock the Notifications