ಕನಕ ಜಯಂತಿ ಇನ್ಮುಂದೆ ಸರ್ಕಾರಿ ಹಬ್ಬ
ಕಲ್ಬುರ್ಗಿ,ಸೆ. 27 : ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸೆ.29 ರಂದು ಸರ್ಕಾರ ರಜೆ ಘೋಷಿಸಿದೆ. ಮಹಾನವಮಿ ಆಯುಧ ಪೂಜೆ(ಆ.10) ಹಾಗೂ ನರಕ ಚತುರ್ದಶಿ(ಆ.27)ಗೂ ರಜೆ ಘೋಷಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.ಈ ರಜೆಗಳನ್ನು ನೆಗೋಷಿಯಬಲ್ ಇನ್ ಸ್ಟ್ರುಮೆಂಟ್ಸ್ ಕಾಯಿದೆಯಡಿ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಕನಕ ಜಯಂತಿಗೆ ರಜೆ
ಭಕ್ತ ಕನಕದಾಸರ ಜಯಂತಿಯನ್ನು (ನ.15) ರಂದು ಸರ್ಕಾರಿ ಹಬ್ಬವಾಗಿ ಆಚರಿಸಲು ಹಾಗೂ ಅಂದು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲು ತೀರ್ಮಾನಿಸಲಾಗಿದೆ. ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದರು.
ರಾಜ್ಯದ ಮೂರನೆ ಮೂರನೇ ಪ್ರಬಲ ಕೋಮು ಕುರುಬ ಜನಾಂಗದ ಓಲೈಕೆಗೆ ಮುಂದಾಗಿರುವ ಬಿಜೆಪಿ ಸರ್ಕಾರ, ಈ ನಿಟ್ಟಿನಲ್ಲಿ ಕನಕಜಯಂತಿಯನ್ನು ಸಾರ್ವತ್ರಿಕ ರಜೆಯನ್ನಾಗಿಸಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಹೈಕ ಪ್ರದೇಶಕ್ಕೆ ಬಂಪರ್ ಕೂಡುಗೆ
ಹೈದರಾಬಾದ್ ಕರ್ನಾಟಕಕ್ಕೆ ನ್ಯಾಯ ದೊರಕೀತೆ?












Click it and Unblock the Notifications