ದೆಹಲಿಯ ಲಘು ಸ್ಫೋಟಕ್ಕೆ ಐವರ ಬಲಿ

ನವದೆಹಲಿ, ಸೆ. 27: ದಕ್ಷಿಣ ದೆಹಲಿಯ ಮಹರೌಲಿಯಲ್ಲಿನ ಎಲೆಕ್ಟ್ರಾನಿಕ್ ಅಂಗಡಿಯ ಬಳಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಒಬ್ಬ ಬಾಲಕ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡ ಘಟನೆ ನಡೆದಿದೆ.

ಮಹರೌಲಿಯ ಹೂವಿನ ಮಾರುಕಟ್ಟೆ ಸಮೀಪದಲ್ಲಿರುವ ಎಲೆಕ್ಟ್ರಿಕ್ ಅಂಗಡಿಯ ಮುಂದೆ ಮಧ್ಯಾಹ್ನ 2.15 ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು, 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಎಲೆಕ್ಟ್ರಾನಿಕ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರಬಹುದೆಂದು ತಿಳಿದ ಜನರು, ಸ್ಫೋಟದ ಭೀಕರ ಶಬ್ದ ಕೇಳಿ ಜನತೆ ಕಂಗಾಲಾಗಿದ್ದಾರೆ. ಜನತೆಗೆ ಧೈರ್ಯ ತುಂಬಿರುವ ಪೊಲೀಸರು ಆತಂಕ ಪಡುವ ವಿಷಯವೇನಿಲ್ಲ. ಗಾಯಾಳುಗಳನ್ನು ಸ್ಥಳೀಯ ಏಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ. ಆದರೆ ಸ್ಫೋಟದ ಕುರಿತು ಪೊಲೀಸರು ಅಧಿಕೃತ ಹೇಳಿಕೆ ನೀಡಿಲ್ಲ.

ಸಾರ್ವಜನಿಕರ ಆಕ್ರೋಶ:

ಸ್ಥಳೀಯ ಹೇಳಿಕೆ ಪ್ರಕಾರ ಮಧ್ಯಾಹ್ನ ಇಬ್ಬರು ಅನಾಮಿಕರು ಬೈಕಿನಲ್ಲಿ ಬಂದು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಟಿಫಿನ್ ಬಾಕ್ಸ್ ಅನ್ನು ಎಸೆದು ಹೋದ ಮರುಕ್ಷಣ ಸ್ಫೋಟ ಸಂಭವಿಸಿದೆ. ಕಡಿಮೆ ಸಾಮರ್ಥ್ಯದ ಸ್ಫೋಟಕ ಬಳಕೆ ಮಾಡಿದ್ದರು ಎನ್ನಲಾಗಿದೆ. ಪೊಲೀಸರು ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಲು ಪೊಲೀಸರು 1 ಗಂಟೆಗೂ ಅಧಿಕ ಕಾಲ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಘಟನಾ ಸ್ಥಳಕ್ಕೆ ಧಾವಿಸಿದ್ದು, ತಪಾಸಣೆ ನಡೆಸಿದ್ದಾರೆ. ಸೆ. 13 ರಂದು ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಉಗ್ರರನ್ನು ಸೆರೆಹಿಡಿದು ವಿಚಾರಣೆ ನಡೆಸಿರುವ ಬೆನ್ನಲ್ಲೇ ಈ ಕೃತ್ಯ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
ಸೈಫ್ ನಿಂದ ದೆಹಲಿ ಸ್ಫೋಟದ ಪ್ರಮುಖ ಮಾಹಿತಿ
ದಿಟ್ಟ ಪೊಲೀಸ್ ಅಧಿಕಾರಿ ಶರ್ಮಾಗೆ ನಮನ
ದಿಲ್ಲಿಯಲ್ಲಿ ಉಗ್ರರೊಂದಿಗೆ ಎನ್ ಕೌಂಟರ್
ದಿಲ್ಲಿ ಸ್ಫೋಟ : ಬಿಜಾಪುರದಲ್ಲಿ ಶಂಕಿತನ ಬಂಧನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+