ಕೇಂದ್ರದಿಂದ ಎಚ್ಚರಿಕೆ ಪತ್ರ ಬಂದಿಲ್ಲ :ವಿಎಸ್ .ಆಚಾರ್ಯ
ಬೆಂಗಳೂರು, ಸೆ.20: ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಬಂದಿರುವ ಪತ್ರದಲ್ಲಿ 355 ನೇ ವಿಧಿ ಅನ್ವಯ ರಾಷ್ಟ್ರಪತಿ ಆಳ್ವಿಕೆ ಹೇರಿಕೆ, ಸರ್ಕಾರ ವಜಾ ಮುಂತಾದ ಪ್ರಮುಖ ಸಂಗತಿಗಳನ್ನು ಪ್ರಸ್ತಾಪಿಸಲಾಗಿದೆ ಎಂಬ ವರದಿಯನ್ನುಗೃಹಸಚಿವ ವಿ.ಎಸ್. ಆಚಾರ್ಯ ಅಲ್ಲಗೆಳೆದಿದ್ದಾರೆ.
ಮಂಗಳೂರು ಕೋಮು ಗಲಭೆ ಬಗ್ಗೆ ಸ್ಪಷ್ಟನೆ ಕೋರಿ ಕೇಂದ್ರದಿಂದ ಪತ್ರ ಬಂದಿರುವುದು ನಿಜ. ಆದರೆ ಅದರಲ್ಲಿ ಎಚ್ಚರಿಕೆಯ ಮಾತುಗಳಿಲ್ಲ. ರಾಜ್ಯದ ಕಾನೂನು ಹಾಗೂ ಸಂಸದೀಯ ಸಚಿವ ಸುರೇಶ್ ಕುಮಾರ್ ಅವರಿಗೆ ತಲುಪಿರುವ ಪತ್ರದಲ್ಲಿ ರಾಜ್ಯದ ಅಲ್ಪ ಸಂಖ್ಯಾತರ ಸರಂಕ್ಷಣೆ ಹಾಗೂ ಕೋಮು ಸಾಮರಸ್ಯದ ಕುರಿತ ಕಾನೂನು ಕ್ರಮದ ಬಗ್ಗೆ ಹೇಳಲಾಗಿದೆ ಅಷ್ಟೆ.
ಮಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ. ಪರಿಸ್ಥಿತಿ ಶಾಂತಗೊಳ್ಳಲು ಪ್ರತಿಪಕ್ಷಗಳ ಸಹಕಾರ ಕೂಡ ಬೇಕು. ಅನಗತ್ಯವಾಗಿ ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಆಚಾರ್ಯ ಹೇಳಿದರು.
(ದಟ್ಸ್ ಕನ್ನ್ನಡ ವಾರ್ತೆ)
ಭಜರಂಗದಳದ ರಾಜ್ಯ ಸಂಚಾಲಕರ ಬಂಧನ
ಚರ್ಚ್ ಮೇಲಿನ ದಾಳಿ ನಿಲ್ಲಿಸದಿದ್ದರೆ ಶಿಸ್ತು ಕ್ರಮ
ಕ್ರೈಸ್ತರಿಂದ ಭಜರಂಗದಳಕ್ಕೆ ಪರ್ಯಾಯ ಸಂಘಟನೆ












Click it and Unblock the Notifications