ಕಸಾಯಿಖಾನೆ ಪಾಲಾಗಬೇಕಿದ್ದ ಹಸುಗಳು ಪಾರು
ಚಿಕ್ಕಮಗಳೂರು, ಸೆ.20: ಟೆಂಪೊ ಒಂದರಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ್ದ ಹಸುಗಳನ್ನು ಜಿಲ್ಲೆಯ ಸಖರಾಯ ಪಟ್ಟಣ ಪೊಲೀಸರು ತಡೆದಿದ್ದಾರೆ. ಕಸಾಯಿಖಾನೆ ಪಾಲಾಗಬೇಕಿದ್ದ ಒಟ್ಟು 18 ಹಸುಗಳು ಪ್ರಾಣಾಪಾಯದಿಂದ ಪಾರಾಗಿವೆ.
ಖಚಿತ ಮಾಹಿತಿ ಮೇರೆಗೆ 407 ಟೆಂಪೊ ಒಂದರಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳನ್ನು ಪೊಲೀಸರು ತಡೆದು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸರು ಶನಿವಾರ ತಿಳಿಸಿದರು. ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಘಟನೆಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಲಾಗಿಲ್ಲ. ಟೆಂಪೊ ಚಾಲಕ ಬಸವರಾಜು ಎಂಬುವನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಇಗ್ಗಲೂರು ಹೈಟೆಕ್ ಕಸಾಯಿಖಾನೆ ಸ್ಥಳಾಂತರ
ಕಸಾಯಿಖಾನೆಗೆ ಒಯ್ಯುತ್ತಿದ್ದ ಗೋರಕ್ಷಣೆ; 15 ಜನ ಬಂಧನ












Click it and Unblock the Notifications