ಒಸಾಮಾ ಬಿನ್ ಲಾಡೆನ್ ನ ಮತ್ತೊಂದು ಮುಖ!

Why Osama bin Laden became Jihadist?ಲಂಡನ್, ಸೆ.16: ಒಸಾಮಾ ಬಿನ್ ಲಾಡೆನ್ ಉಗ್ರಗಾಮಿಯಾಗಿ ಬದಲಾಗಲು ಕಾರಣವೇನು? ಎಂಬುದರ ಬಗ್ಗೆ ಬ್ರಿಟನ್ ನಲ್ಲಿರುವ ಲಾಡೆನ್ ಮಾಜಿ ವೈಯಕ್ತಿಕ ಭದ್ರತಾ ತಜ್ಞ ಆರ್ಥರ್ ರಿಡಿಂಗ್ ಕೆಲವೊಂದು ವಿಷಯಗಳನ್ನು ಹೇಳಿದ್ದಾರೆ.

ಎರಡು ದಶಕಗಳ ಹಿಂದೆ ಅಮೆರಿಕದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಆತನ ಪ್ರೀತಿಯ ಸಹೋದರ ಸಲೇಂ ಮೃತಪಟ್ಟ. ಆ ಬಳಿಕ ಲಾಡೆನ್ ಮನಸ್ಥಿತಿ ಬದಲಾಗಿ ಉಗ್ರಗಾಮಿಯಾದ. ''ಆತ ಒಬ್ಬ ಸೌಮ್ಯ ಸ್ವಭಾವದ ಸಾಮಾನ್ಯ ಯುವಕನಾಗಿದ್ದ. ನಗರವೊಂದರಲ್ಲಿ ಆತ ಐಷಾರಾಮಿ ಜೀವನ ಸಾಗಿಸುತ್ತಿದ್ದ. ಸಹೋದರನ ಸಾವು ಆತನಲ್ಲಿ ಕ್ರೌರ್ಯ ಉಂಟು ಮಾಡಿತು'' ಎನ್ನುತ್ತಾರೆ ರಿಡಿಂಗ್. ಆತನ ಕುಟುಂಬಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದ್ದರಿಂದ ಲಾಡೆನ್ ಬಗ್ಗೆ ಹೆಚ್ಚಿನ ವಿವರ ನೀಡಲು ಸಾಧ್ಯವಾಗಿದೆ ಎಂದು ಅವರು 'ಡೈಲಿ ಮೈಲ್' ಪ್ರತಿಕೆಯಲ್ಲಿ ಹೇಳಿಕೊಂಡಿದ್ದಾರೆ.

''ನಾನು ಲಾಡೆನ್ ನನ್ನು ಕೊನೆಯ ಬಾರಿ ನೋಡಿದ್ದು 70ರ ದಶಕದಲ್ಲಿ. ಆ ಬಳಿಕ ಆತ ಆಫ್ಘಾನಿಸ್ತಾನಕ್ಕೆ ತೆರಳಿದ. 1970ರಲ್ಲಿ ಸೌದಿ ಅರೇಬಿಯಾದಲ್ಲಿ ಲಾಡೆನ್ ಕುಟುಂಬ ಬಹು ಮಿಲಿಯನ್ ಮೌಲ್ಯದ ಕಟ್ಟಡ ನಿರ್ಮಿಸುತ್ತಿತ್ತು. ಆ ಕಟ್ಟಡದ ಭದ್ರತಾ ಗುತ್ತ್ತಿಗೆದಾರನಾಗಿ ತಾನು ಕಾರ್ಯನಿರ್ವಹಿಸಿದ್ದೆ. ಆಗಲೆ ಲಾಡೆನ್ ನನ್ನು ನಾನು ಭೇಟಿಯಾಗಿದ್ದು. ತನ್ನ ಭವ್ಯ ಬಂಗಲೆಗೆ ಕ್ಷಿಪಣಿ ನಿರೋಧಕ ಗಾಜು ಅಳವಡಿಸುವಂತೆ ಆತ ಕೇಳಿಕೊಂಡಿದ್ದ'' ಎನ್ನುತ್ತಾರೆ ರಿಡಿಂಗ್.

ಕೆಂಪು ಸಮುದ್ರ ತೀರದಲ್ಲಿರುವ ಲಾಡೆನ್ ಬೀಚ್ ಹೌಸ್ ಅತ್ಯಂತ ದುಬಾರಿ ಕಟ್ಟಡವಾಗಿದೆ. ಇದರ ಗಾಜಿನ ಗೋಡೆಗಳ ಮೂಲಕ ಸಮುದ್ರವನ್ನು ನೋಡಿದರೆ ಬೃಹತ್ ಆಕ್ವೇರಿಯಂ ನೋಡಿದಂತಾಗುತ್ತದೆ ಎಂದು ಲಾಡೆನ್ ನ ಅಂದಿನ ಜೀವನವನ್ನು ಅವರು ಬಣ್ಣಿಸಿದ್ದಾರೆ. ಲಾಡೆನ್ ಮನೆಗಾಗಿ ನಾನು ಅಗ್ನಿ ನಿರೋಧಕ ಕೋಣೆಗಳನ್ನು ನಿರ್ಮಿಸಿದ್ದೆನು. ಆದರೆ ಎಂದೂ ಆತನನ್ನು ಕೋಣೆಗಳ ಒಳಗೇನಿದೆ ಎಂದು ಕೇಳಿಲ್ಲ. ಕಾವಲುಗಾರರಿಗೆ ಭಾರೀ ಸಂಭಾವನೆ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

(ಏಜೆನ್ಸೀಸ್)
ಪಾಕ್ ಗುಡ್ಡಗಾಡು ಪ್ರದೇಶದಲ್ಲಿದೆ ಲಾಡೆನ್‌ನ ಡೆನ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+