ಭಾರತದ ಹಾರ್ಡ್ ವೇರ್ ಕ್ಷೇತ್ರದಲ್ಲಿ ಹೊಸ ಸಾಧನೆ

ಬೆಂಗಳೂರು, ಸೆ.16: ಸೋಮವಾರ ಭಾರತೀಯ ಹಾರ್ಡ್ ವೇರ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಾಯಿತು. ಸಂಪೂರ್ಣವಾಗಿ ನಗರದ ಇಂಟಲ್ ಸಂಶೋಧನಾ ಕೇಂದ್ರದಲ್ಲಿ ವಿನ್ಯಾಸಗೊಂಡ ಮೈಕ್ರೋಪ್ರೋಸೆಸರ್ ನ್ನು ಅನಾವರಣಗೊಳಿಸಲಾಯಿತು. ಇದರಿಂದಾಗಿ ಸಿಲಿಕಾನ್ ಸಿಟಿ ಎನಿಸಿದ್ದ ಬೆಂಗಳೂರು, ಈಗ ಹಾರ್ಡ್ ವೇರ್ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸುವತ್ತ ದಾಪುಗಾಲಿರಿಸಿದೆ.

ಇಂಟೆಲ್ ಪ್ರಧಾನ ವ್ಯವಸ್ಥಾಪಕ ಹಾಗೂ ಉಪಾಧ್ಯಕ್ಷ ಟಾಮ್ ಕಿಲ್ ರಾಯ್ ಅವರು ಸೋಮವಾರ ಸ್ಯಾನ್ ಫಾನ್ಸಿಸ್ಕೋನಲ್ಲಿ ಬೆಂಗಳೂರಿನಲ್ಲಿ ವಿನ್ಯಾಸಗೊಂಡ Xeon 7400 quad-core ಪ್ರೋಸೆಸರ್ ಅನ್ನು ಅನಾವರಣಗೊಳಿಸಿದರು. ಡನ್ನಿಂಗ್ ಟನ್ ಎಂಬ ಗುಪ್ತನಾಮವನ್ನು ಈ ಪ್ರೋಸೆಸರ್ ಗೆ ನೀಡಲಾಗಿದೆ.

ಈ ಪ್ರೋಸೆಸರ್ ಮುಖ್ಯವಾಗಿ ಉದ್ದಿಮೆದಾರರನ್ನು ಗುರಿಯಾಗಿರಿಸಿಕೊಂಡು ರೂಪಿಸಲಾಗಿದೆ. ಇದರಲ್ಲಿ ಸುಮಾರು 1.9 ಕೋಟಿ ಟ್ರಾನ್ಸ್ ಸಿಸ್ಟರ್ ಗಳು, 16 ಎಂಬಿ ಕ್ಯಾಶ್ ಮೆಮೋರಿ ಹಾಗೂ ಅತ್ಯುನ್ನತವಾದ 45 nm(nano meter) K ಫ್ಯಾಬ್ರಿಕೇಷನ್ ಹೊದಿಕೆ ಹೊಂದಿದೆ. ಪ್ರೋಸೆಸರ್ ನ ವಿನ್ಯಾಸ ಹಾಗೂ ಸಾಮರ್ಥ್ಯ ಪರೀಕ್ಷೆ ಬೆಂಗಳೂರಿನ ಪ್ರಯೋಗಾಲಯದಲ್ಲಿ ಮಾಡಲಾಗಿದೆ. ಮುಂಬರುವ ಆಧುನಿಕ ತಂತ್ರಾಂಶ(ಸಾಫ್ಟ್ ವೇರ್)ಕ್ಕೆ ಹೊಂದಿಕೊಂಡು ಕಾರ್ಯ ನಿರ್ವಹಿಸುವಂತೆ ಇದನ್ನು ರೂಪಿಸಲಾಗಿದೆ.

ಅತ್ಯಧಿಕ ಸಾಮರ್ಥದ ಕಾರ್ಯ ನಿರ್ವಹಣೆ ಬೇಕಾಗುವ ಸಾಪೇಕ್ಷ ದತ್ತ ಸಂಚಯ ವ್ಯವಸ್ಥೆ (RDBMS), ಸಂಪನ್ಮೂಲ ಯೋಜನಾ ಕಾರ್ಯಕ್ರಮ(enterprise resource planning programs) ಮುಂತಾದ ಕಡೆ ಈ ಪ್ರೋಸೆಸರ್ ಬಳಕೆಗೆ ಯೋಗ್ಯವಾಗಿದೆ. ಉದಾಹರಣೆಗೆ ಷೇರು ಮಾರುಕಟ್ಟೆ, ಬಂಡಾವಳ ಹೂಡಿಕೆ ಕೇಂದ್ರ, ಬ್ಯಾಂಕ್ ಗಳಲ್ಲಿನ ಸರ್ವರ್ ಗಳಲ್ಲಿ ಈ ಪ್ರೋಸೆಸರ್ ಬಳಕೆ ಮಾಡಬಹುದಾಗಿದೆ.

ಜೂನ್ ಗೆ ಅಂತ್ಯವಾದ ತ್ರೈಮಾಸಿಕ ವರದಿಯಂತೆ ಒಟ್ಟು 13. 9 ಕೋಟಿ ಪ್ರೋಸೆಸರ್ ಮಾರಾಟವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಂತ್ರಾಂಶ ಹಾಗೂ ಸೇವಾಧಾರಿತ ಕ್ಷೇತ್ರದಲ್ಲಿ ಮಾತ್ರ ಭಾರತವನ್ನು ಗುರುತಿಸುತ್ತಿದ್ದರು. ಈಗ ಕ್ಲಿಷ್ಟಕರವಾದ ಸಂಶೋಧನಾ ಹಾಗೂ ಅಭಿವೃದ್ಧಿ ಉತ್ಪನ್ನಗಳ ತಯಾರಿಕಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುತ್ತಿರುವುದು ಸಂತೋಷದ ವಿಷಯ. ಇಂಟೆಲ್ ನ ಈ ಸಾಧನೆ ಹಾರ್ಡ್ ವೇರ್ ಕ್ಷೇತ್ರದಲ್ಲಿ ಹೊಸ ದಾರಿಯನ್ನು ತೋರಲಿದೆ ಎಂದು ಇಂಟೆಲ್ ಇಂಡಿಯಾದ ಅಧ್ಯಕ್ಷ ಪ್ರವೀಣ್ ವಿಷಕಂಠಯ್ಯ ಹೇಳುತ್ತಾರೆ.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+