ಮಾಂತ್ರಿಕ ಕುಂವೀ ಜತೆ ರಾಯಲ ಸೀಮೆ ಕಥೆ ಕೇಳಿ

ಬೆಂಗಳೂರು, ಸೆ.10: ಕುಂ.ವೀರಭದ್ರಪ್ಪ ಕನ್ನಡ ಸಾಹಿತ್ಯಲೋಕ ಕಂಡ ವಿಶಿಷ್ಟ ಕತೆಗಾರ. ಬೆಚ್ಚಿ ಬೀಳಿಸುವ ಲೋಕವೊಂದನ್ನು ತನ್ನ ವಿಕಟ ನಿರೂಪಣೆಯಿಂದಲೇ ಬಿಚ್ಚಿಟ್ಟ ದಿಟ್ಟ ಕತೆಗಾರ. ಕತೆ ಹೇಳಲು ಎಂದೂ ಆಯಾಸಗೊಳ್ಳದ ಸೃಜನಶೀಲತೆಯ ಅಕ್ಷಯಪಾತ್ರೆ.

ಈ ಅಪರೂಪದ ಕತೆಗಾರನ ಜೊತೆ ಈ ಭಾನುವಾರದ(ಸೆ.14) ಸಂಜೆಯನ್ನು ಕಳೆಯಲು ಛಂದ ಪುಸ್ತಕವು ಅವಕಾಶ ಮಾಡಿಕೊಡುತ್ತಿದೆ. ಮಳೆಯ ನೆಪವೊಡ್ಡದೆ ದಯವಿಟ್ಟು ಹೋಗಿ ಬನ್ನಿ! ಕಾರ್ಯಕ್ರಮದಲ್ಲಿ ಕಿ.ರಂ.ನಾಗರಾಜ್, ಓ.ಎಲ್.ನಾಗಭೂಷಣಸ್ವಾಮಿ, ಮಂಜುನಾಥ್ ಲತಾ, ವಿಕ್ರಮ ವಿಸಾಜಿ, ಆನಂದ ಋಗ್ವೇದಿ, ಕವಿತಾ ಕುಸುಗಲ್ಲ, ನಟ ಕರಿಬಸವಯ್ಯ ಉಪಸ್ಥಿತರಿರುತ್ತಾರೆ.

ಸ್ಥಳ: ಎನ್ ಎಂಕೆಆರ್ ವಿ ಕಾಲೇಜು, ಶಾಶ್ವತಿ ಸಭಾಂಗಣ, ಜಯನಗರ 3ನೇ ಬ್ಲಾಕ್, ಬೆಂಗಳೂರು
ಸಮಯ: ಸಂಜೆ 3.30ಕ್ಕೆ

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+