ಎಚ್ಎಎಲ್ ಪುನಾರಂಭಕ್ಕೆ ಯಡಿಯೂರಪ್ಪ ಒಲವು
ಬೆಂಗಳೂರು, ಸೆ. 10 : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಳಪೆ ಗುಣಮಟ್ಟದ ಕುರಿತು ಕಿಡಿಕಾರಿರುವ ಮುಖ್ಯಮಂತ್ರಿ ಯಡಿಯೂರಪ್ಪ ನಗರಕ್ಕೆ ಇನ್ನೊಂದು ವಿಮಾನ ನಿಲ್ದಾಣ ಅಗತ್ಯವಿರುವ ಹಿನ್ನೆಲೆಯಲ್ಲಿ ಎಚ್ಎಎಲ್ ವಿಮಾನ ನಿಲ್ದಾಣ ಪುನಾರಂಭ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿಗೆ ವಿಶ್ವ ದರ್ಜೆ ಗುಣಮಟ್ಟದ ಏರ್ ಪೋರ್ಟ್ ನಿರ್ಮಾಣ ಮಾಡಬೇಕಿತ್ತು. ಈಗ ನಿರ್ಮಾಣಗೊಂಡಿರುವ ವಿಮಾನನಿಲ್ದಾಣ ಹಾಗೂ ಅಲ್ಲಿ ಕಲ್ಪಿಸಿರುವ ಸವಲತ್ತು ತೀರಾ ಕಳಪೆಯಾಗಿದೆ. ಅಮೆರಿಕ ಪ್ರವಾಸ ಸಂದರ್ಭದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣಗಳನ್ನು ನೋಡಿ, ನಮ್ಮಲ್ಲೇಕೆ ಇಂಥದು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆ ಮೂಡಿತು ಎಂದರು. ವಿಮಾನ ನಿಲ್ದಾಣ ಗುಣಮಟ್ಟ ಕುರಿತು ಪರಿಶೀಲನೆ ನಡೆಸಲು ವಿಧಾನ ಮಂಡಲ ಜಂಟಿ ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
(ದಟ್ಸ್ ಕನ್ನಡ ವಾರ್ತೆ)
ಬಿಐಎಗೆ ಅತಿಸೂಕ್ಷ್ಮವಿಮಾನ ನಿಲ್ದಾಣ ಎಂಬ ಹಣೆಪಟ್ಟಿ
ರಾಜ್ಯದಲ್ಲಿ ಮತ್ತಷ್ಟು ನೂತನ ವಿಮಾನ ನಿಲ್ದಾಣಗಳು












Click it and Unblock the Notifications