ಮೊಬೈಲ್ ಮೂಲಕ ಮತದಾರರ ಭಾವಚಿತ್ರ

ಬೆಂಗಳೂರು, ಸೆ. 5: ರಾಜ್ಯದಲ್ಲಿ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ನೀಡುವ ವಿಶೇಷ ಅಭಿಯಾನ 30 ನೇ ಸೆಪ್ಟೆಂಬರ್ ರವರೆಗೆ ನಡೆಯಲಿದೆ. ಪ್ರಾಯೋಗಿಕವಾಗಿ ಮೊಬೈಲ್ ಫೋನ್ ಉಪಯೋಗಿಸಿ, ಮತದಾರರ ಭಾವಚಿತ್ರವನ್ನು ತೆಗೆದು ಗುರುತಿನ ಚೀಟಿ ನೀಡುವ ಕಾರ್ಯಕ್ರಮವೊಂದನ್ನು ಜಯನಗರ ವಿಧಾನಸಭಾ ಕ್ಷೇತ್ರದ 58 ನೇ ವಾರ್ಡ್‌ನಲ್ಲಿರುವ 44ನೇ ಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಭಾಗದಲ್ಲಿ ಸೆಪ್ಟೆಂಬರ್ 6ಮತ್ತು 7 ರಂದು ಬೆಳಿಗ್ಗೆ 8.00 ಗಂಟೆಯಿಂದ ಸಂಜೆ 7.00 ಗಂಟೆವರೆಗೆ ನಿಗದಿಪಡಿಸಿದ್ದು, ನಿಯೋಜಿತ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಭಾವಚಿತ್ರಗಳನ್ನು ತೆಗೆಯಲು ವ್ಯವಸ್ಥೆ ಮಾಡಲಾಗಿದೆ.

ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಾಗಿದ್ದು, ಇದರ ಫಲಿತಾಂಶಗಳನ್ನು ಮನಗಂಡು ಉಳಿದ ವಿಧಾನ ಸಭಾ ಕ್ಷೇತ್ರಗಳಿಗೆ ಇದನ್ನು ವಿಸ್ತರಿಸಲು ಉದ್ದೇಶಿಸಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಮತದಾರರು ಭಾಗವಹಿಸಿ ತಮ್ಮ ಭಾವಚಿತ್ರಗಳನ್ನು ತೆಗೆಯಲು ಅವಕಾಶ ಮಾಡಿಕೊಡಬೇಕೆಂದು ಮುಖ್ಯ ಚುನಾವಣಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಡ್ರಾಪ್ ಬಾಕ್ಸ್ ವಜಾ, ಹೊಸ ವ್ಯವಸ್ಥೆ ಜಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+