ಭಜರಂಗದಳ, ವಿಹಿಂಪ ನಿಷೇಧಕ್ಕೆ ಕಾಂಗ್ರೆಸ್ ಆಗ್ರಹ

Mnish Tiwariನಹದೆಹಲಿ, ಸೆ. 4 : ಭಜರಂಗದಳ, ವಿಶ್ವಹಿಂದೂ ಪರಿಷತ್ ಮುಂತಾದ ಸಂಘ ಪರಿವಾರದ ಘಟಕಗಳ ಮೇಲೆ ನಿಷೇಧ ಹೇರುವಂತೆ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಅಷ್ಟೇ ಅಲ್ಲ, ಸಿಮಿ ಸಂಘಟನೆಯೂ ಸೇರಿದಂತೆ ಸಂಘ ಪರಿವಾರದ ಇತರ ಘಟಕಗಳ ಚಟುವಟಿಕೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದೂ ಒತ್ತಾಯಿಸಿದೆ.

"ಈ ಸಂಘಟನೆಗಳ ಕಾರ್ಯವೈಖರಿಗಳು ದೇಶದ ಏಕತೆ ಮತ್ತು ಭದ್ರತೆಗೆ ಭಂಗ ತರುವಹಾಗೆ ಕಾಣಿಸುತ್ತವೆ. ಈ ಸಂಘಟನೆಗಳ ಧೋರಣೆಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಜಾತ್ಯತೀತ ಸಮಾಜವನ್ನು ಧಿಕ್ಕರಿಸಿ ನಡೆಯುವ ಹಾಗೆ ಗೋಚರಿಸುತ್ತದೆ. ಆದಕಾರಣ, ನಿಷೇಧ ಹೇರಬೇಕಾಗಿರುವ ಪರಿಸ್ಥಿತಿ ಇದೆ".

ಈ ರೀತಿ ಬುಧವಾರ ನವದೆಹಲಿಯಲ್ಲಿ ಮಾತನಾಡಿದವರರು ಕಾಂಗ್ರೆಸ್ಸಿನ ವಕ್ತಾರ ಮನೀಶ್ ತಿವಾರಿ. ನಿಷೇಧ ಹೇರುವುದು ಬಿಡುವುದು ಸರಕಾರಕ್ಕೆ ಬಿಟ್ಟ ವಿಷಯ. ಆ ಸಂಘಟನೆಗಳ ಕಾರ್ಯವಿಧಾನ ಮತ್ತು ಚಟುವಟಿಕೆಗಳ ಬಗ್ಗೆ ವರದಿಗಳನ್ನು ತರಿಸಿಕೊಂಡು ಸರಕಾರ ಆ ಪ್ರಕಾರ ತೀರ್ಮಾನ ಕೈಕೊಳ್ಳಬೇಕು ಎಂಬುದು ಅವರ ಅಭಿಮತ.

ಸಿಮಿ ಸಂಘಟನೆಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಭಾಜಪ ನಾಯಕರುಗಳಾದ ಲಾಲ್ ಕೃಷ್ಣ ಅಡ್ವಾನಿ ಮತ್ತು ನರೇಂದ್ರ ಮೋದಿ ಅವರ ಆಗ್ರಹಕ್ಕೆ ಮರುಸವಾಲೋ ಎಂಬಂತೆ ಕಾಂಗ್ರೆಸ್ಸಿನ ವಕ್ತಾರರು ಮಾತನಾಡಿದ್ದಾರೆ. ಸಿಮಿ ಬಗ್ಗೆ ಮಾತ್ರ ಆಗ್ಹಹಿಸುವ ಆಡ್ವಾನಿ, ಇನ್ನಿತರ ಸಂಘಟನೆಗಳ ಇತರ ದೇಶದ್ರೋಹಿ ಚಟುವಟಿಕೆಗಳ ಬಗ್ಗೆ ಸುಮ್ಮನಿರುವುದನ್ನು ನೋಡಿದರೆ ಆಡ್ವಾನಿ ಡಬ್ಬಲ್ ಸ್ಟ್ಯಾಂಡರ್ಡ ಎನಿಸುತ್ತಾರೆ ಎಂದು ಮನೀಶ್ ಚುಚ್ಚಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+