ಅಂತ್ಯ ಕಂಡ ಬಿಎಂಡಬ್ಲ್ಯುಹಿಟ್ ಅಂಡ್ ರನ್ ಪ್ರಕರಣ

Sanjeev Nandaನವದೆಹಲಿ, ಸೆ. 2 : ಭಾರಿ ಕುತೂಹಲ ಕೆರಳಿಸಿದ್ದ ಬಿಎಂಡಬ್ಲೂ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೀವ ನಂದಾ ಪ್ರಮುಖ ಅಪರಾಧಿ ಎಂದು ದೆಹಲಿಯ ಹೈಕೋರ್ಟ್ ಸೋಮವಾರ ತೀರ್ಪುನೀಡಿದೆ. ಪಾಟಿಯಾಲಾ ನ್ಯಾಯಾಲಯದಲ್ಲಿ ಪ್ರಕರಣದ ಸಹ ಆರೋಪಿಯಾಗಿದ್ದ ಮಾಣಿಕ್ ಕಪೂರ್ ನಿರ್ದೋಷಿಯಾದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲು ನ್ಯಾಯಾಲಯ ಸೂಚನೆ ನೀಡಿದೆ.

ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ವಿನೋದ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠವು ಮಂಗಳವಾರ ಅಂತಿಮ ಹಂತದ ವಿಚಾರಣೆ ನಡೆಸಿ ಕಲಂ 304(2)ರ ಅಡಿಯಲ್ಲಿ ಸಂಜೀವ ನಂದಾ ಅಪರಾಧಿ ಎಂದು ತೀರ್ಪು ನೀಡಿದೆ. ಸಂಜೀವ ನಂದಾ ಅವರಿಗೆ ಕನಿಷ್ಠ 10 ವರ್ಷಗಳ ಜೈಲು ವಾಸ ಶಿಕ್ಷೆ ಘೋಷಣೆಯಾಗುವ ಸಾಧ್ಯತೆಗಳಿವೆ.

ಏನಿದು ಪ್ರಕರಣ?

1999 ರ ಜನವರಿಯಲ್ಲಿ ಪಟಿಯಾಲದ ಲೋಧಿ ಬಡಾವಣೆಯಲ್ಲಿ ಬಿಎಂಡಬ್ಲೂ ಕಾರ್ ನ್ನು ವೇಗವಾಗಿ ಚಾಲನೆ ಮಾಡಿ ಮೂವರು ಪೊಲೀಸರು ಸೇರಿದಂತೆ ಆರು ಮಂದಿ ಸಾವಿಗೆ ಸಂಜೀವ ನಂದಾ ಕಾರಣರಾಗಿದ್ದರು. ಆಗ ಸಂಜೀವ ನಂದಾ ಅವರ ಮೇಲೆ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಲಾಗಿತ್ತು. ಪಾಟಿಯಾಲ ನ್ಯಾಯಾಲಯದ ನಂತರ ದೆಹಲಿಯ ಹೈಕೋರ್ಟ್‌ಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಕಳೆದ ಹತ್ತು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಕೊನೆಗೂ ಇಂದು ಆರೋಪಿಯನ್ನು ಅಪರಾಧಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು.

ಸಂಜೀವ ನಂದಾ ನಿವೃತ್ತ ಸೇನಾಧಿಕಾರಿ ಎಸ್.ಎಂ.ನಂದಾ ಅವರ ಮೊಮ್ಮಗ. ಸಂಜೀವನ ಜೊತೆಗೆ ಇನ್ನೂ ಮೂವರಾದ ರಾಜೀವ ಗುಪ್ತಾ, ಬೋಲ್ ನಾಥ್, ಶ್ಯಾಂ ಸಿಂಗ್ ರಾಣಾ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಹಿನ್ನೆಲೆಯಲ್ಲಿ ಇವರನ್ನು ಅಪರಾಧಿಗಳೆಂದು ನ್ಯಾಯಾಲಯ ಪರಿಗಣಿಸಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+