ನೈಸ್ ವಿರುದ್ಧ ಅನಂತಮೂರ್ತಿ ಸುಪ್ರಿಂಕೋರ್ಟ್‌ಗೆ
ನವದೆಹಲಿ, ಸೆ. 2 : ಬೆಂಗಳೂರು- ಮೈಸೂರು ಕಾರಿಡಾರ್ ಎಕ್ಸ್‌ಪ್ರೆಸ್ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ವಾಸ್ತವಾಂಶಗಳನ್ನು ನ್ಯಾಯಾಲಯದಿಂದ ಮರೆಮಾಚಿದೆ.ಯೋಜನೆಯ ಸುಮಾರು 30 ಸಾವಿರ ಕೋಟಿ ರು. ಮೌಲ್ಯದ ಮಹಾವಂಚನೆಯನ್ನು ಸಕ್ರಮದ ಹೆಸರಿನಲ್ಲಿ ಮುಚ್ಚಿಹಾಕಲು ಹೊರಟಿರುವ ಕ್ರಮವನ್ನು ಪ್ರಶ್ನಿಸಿ ಸಾಹಿತಿ ಪ್ರೊ. ಯು.ಆರ್. ಅನಂತಮೂರ್ತಿ ಸುಪ್ರಿಂಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಸೋಮವಾರ ತನ್ನ ಮುಂದೆ ಬಂದಿದ್ದ ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಸದಾಶಿವಂ ಅವರಿದ್ದ ನ್ಯಾಯಪೀಠ ಮತ್ತೊಂದು ಪೀಠಕ್ಕೆ ವರ್ಗಾಯಿಸಿದರು. ರಾಜ್ಯ ಸರ್ಕಾರದ ಮೇಲೆ ನೈಸ್ ಹೂಡಿರುವ ನ್ಯಾಯಲಯ ನಿಂದನೆಗಳ ಕೇಸುಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಅವರ ಪೀಠದ ಮುಂದೆ ಅನಂತಮೂರ್ತಿ ಅವರ ಅರ್ಜಿಯೂ ಇದೇ 17 ವಿಚಾರಣೆಗೆ ಬರಲಿದೆ.
ಸಾರ್ವಜನಿಕ ಹಿತ ಮತ್ತು ನ್ಯಾಯಾಂಗ ನಿಂದನೆ ಕುರಿತ ಸುಪ್ರಿಂಕೋರ್ಟ್ ವಿಚಾರಣಾ ವ್ಯಾಪ್ತಿಯನ್ನು ನೈಸ್ ಕಂಪನಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಅನಂತ್ ಮೂರ್ತಿ ಆಪಾದಿಸಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications