ಬಿಜೆಪಿ ವಿರುದ್ಧ ಕಾಂಗ್ರೆಸ್‌ನ 'ಆಪರೇಶನ್ ಹಸ್ತ'

Veerappa moilyಮಂಗಳೂರು, ಸೆ.1: ಬಿಜೆಪಿಯ 'ಆಪರೇಶನ್ ಕಮಲ'ಕ್ಕೆ ವಿರುದ್ಧವಾಗಿ 'ಆಪರೇಷನ್ ಹಸ್ತ' ಪ್ರಾರಂಭಿಸಿದರೆ ನಿಸ್ಸಂದೇಹವಾಗಿ ಕಮಲ ಮುದುಡಿಕೊಳ್ಳುತ್ತದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಂಗಳೂರಿನ ಶಾಂತಿಕಿರಣ ಸಭಾಂಗಣದಲ್ಲಿ ಭಾನುವಾರ 'ಕಾಂಗ್ರೆಸ್ ಕುಟುಂಬ' ಸದಸ್ಯರ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮೊಯ್ಲಿ ಮಾತನಾಡುತ್ತಾ, ಸೂಕ್ತ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದಲೂ ಆಪರೇಶನ್ ಆರಂಭವಾಗಲಿದೆ. ಬಿಜೆಪಿ ಪಕ್ಷ ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಆಪರೇಶನ್ ಕಮಲಕ್ಕೆ ಮುಂದಾಗಿದೆ. ಆ ರೀತಿ ಮಾಡಲು ನಮಗೂ ಗೊತ್ತಿದೆ, ಆದರೆ ನಾವು ಶಾಸಕರ ಆಪರೇಶನ್ ಮಾಡುವುದಿಲ್ಲ. ಜನರ, ಶಾಸಕರ ವಿಶ್ವಾಸವನ್ನು ಗಳಿಸಿಕೊಂಡು ಆಪರೇಶನ್ ನಡೆಸುವ ಮೂಲಕ ಪಕ್ಷ ಬಲಪಡಿಸುವುದಾಗಿ ಹೇಳಿದರು.

ಸ್ವಶಕ್ತಿಯಿಂದ ಅಧಿಕಾರಕ್ಕೆ ಬರಲು ಶಕ್ತವಾಗದ ಬಿಜೆಪಿ ತನ್ನ ಅಸ್ತಿತ್ವಕ್ಕಾಗಿ 'ಆಪರೇಷನ್ ಕಮಲ' ಆರಂಭಿಸಿತು. ಪ್ರತಿಯೊಂದು ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಶಕ್ತಿ ಪ್ರದರ್ಶನ ಮಾಡಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನ ಯುವ ಕಾರ್ಯಕರ್ತರು ಒಗ್ಗಟ್ಟಾಗಬೇಕಾಗಿದೆ. ಬಿಜೆಪಿ ವಿಭಜನೆಯ ವಿಷಬೀಜ ಬಿತ್ತಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಹಿಂದೆ ಅದಕ್ಕೆ ರಾಮಸೇತು ಬೇಕಿದ್ದರೆ ಈಗ ಅಮರನಾಥ ಯಾತ್ರೆ ವಿವಾದವನ್ನು ಮುಂದಿಟ್ಟುಕೊಂಡು ಅದರ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ ಎಂದರು.

(ದಟ್ಸ್‌ಕನ್ನಡ ವಾರ್ತೆ)

ಆಪರೇಷನ್ ಕಮಲ ತಿರುಗುಬಾಣವಾಗಲಿದೆ : ಧರ್ಮಸಿಂಗ್
ರೇಣುಕ ಎಬ್ಬಿಸಿದ ಬಿರುಗಾಳಿಗೆ ಕನಲಿದ ಕಮಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+