ಬಿಲಿಯರ್ಡ್ಸ್ ಚಾಂಪಿಯನ್ ಶಿಪ್: ಪಂಕಜ್ ಫೇವರೇಟ್

Pankaj advaniಬೆಂಗಳೂರು, ಸೆ. 1 : ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಗರದಲ್ಲಿ ಇಂದಿನಿಂದ ಆರಂಭವಾಗಿದೆ. ರಾಜ್ಯ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಗೂಳಿಹಟ್ಟಿ ಶೇಖರ್ ಅವರು ಟೂರ್ನಿಗೆ ವಿದ್ಯುಕ್ತ ಚಾಲನೆ ನೀಡಿದರು. ಟೂರ್ನಿಯಲ್ಲಿ ವಿಲ್ಸನ್ ಜೊನ್ಸ್ ಮತ್ತು ಗೀತ ಸೇಥಿ ಯಂತಹ ಘಟಾನುಘಟಿಗಳು ಭಾಗವಹಿಸಲಿದ್ದು, ಮಾಜಿ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಪ್ರಶಸ್ತಿ ಪಡೆಯುವ ಹಾಟ್ ಫೇವರೇಟ್ ಆಗಿದ್ದು, ಎಲ್ಲರ ಕಣ್ಣು ಅವರತ್ತ ನೆಟ್ಟಿದೆ.

ಎರಡು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಅಗಿರುವ ಪಂಕಜ್ ಅಡ್ವಾಣಿ ಅವರ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ. ತವರು ನೆಲ ಬೆಂಗಳೂರಿನಲ್ಲಿ ನಡೆಯುತ್ತಿರುವ ಟೂರ್ನಿ ಆಗಿದ್ದರಿಂದ ಮತ್ತಷ್ಟು ವಿಶ್ವಾಸ ಹೆಚ್ಚಿದೆ.ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸದೆ ಉತ್ತಮವಾಗಿ ಆಡುವುದಾಗಿ ವಿಶ್ವಾಸದಿಂದ ನುಡಿದಿದ್ದಾರೆ. ಕೊನೆಯದಾಗಿ ಪ್ರಶಸ್ತಿ ಗೆಲ್ಲುವುದೇ ನನ್ನ ಅಂತಿನ ಗುರಿಯಾಗಿದೆ ಎಂದು ಹೇಳಿದ್ದಾರೆ.

ಪಂಕಜ್ ಅಡ್ವಾಣಿ ಅವರ ಶ್ರೇಷ್ಠ ಸಾಧನೆಗಾಗಿ ಭಾರತ ಸರ್ಕಾರ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಟೂರ್ನಿಯಲ್ಲಿ ಪೀಟರ್ ಗಿಲ್ ಕ್ರಿಸ್ಟ್, ಪ್ರುಫೆಟ್ ಚೇತನ್ ಶಖೂನ್ ಸೇರಿದಂತೆ ಭಾರತೀಯ ಆಟಗಾರರಾದ ಗೀತ ಸೇಥಿ, ಧೃವ ಸಿತ್ವಾಲೆ, ರೂಪೇಶ್ ಶಾ ಉತ್ತಮ ಪ್ರದರ್ಶನ ನೀಡುವ ಸನ್ನಾಹದಲ್ಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+