ಗ್ರಾನೈಟ್ ಪ್ರೈವೇಟ್ ಲಿಮಿಟೆಡ್ ಗೋಲ್‍ಮಾಲ್ ಕಂಪನಿ

ಬೆಂಗಳೂರು, ಆ. 31 : ಮೆ.ಗ್ರಾನೈಟ್ ಪ್ರೈವೇಟ್ ಲಿಮಿಟೆಡ್ ಎಂಬ ರಿಯಲ್ ಎಸ್ಟೇಟ್ ಗೋಲ್ ಮಾಲ್ ಕಂಪನಿಯೂಂದು ಬಿಡಿಎ ಅನುಮತಿ ಪಡೆಯದೆ ಯೊರೋಪಿಯನ್ ಟೌನ್ ಶಿಪ್ ಹೆಸರಿನಲ್ಲಿ ನಿವೇಶನಗಳನ್ನು ಮಾರಾಟ ಮಾಡುವುದಾಗಿ ದಿನಪತ್ರಿಕೆ, ಎಲೆಕ್ಟ್ರಾನಿಕ್ ಮಾದ್ಯಮಗಳಲ್ಲಿ ಜಾಹೀರಾತು ನೀಡಿ ಜನತೆಯನ್ನು ಮೋಸಗೊಳಿಸತೊಡಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಸಿದೆ.

1976ರ ಕಲಂ 32 ಮತ್ತು ಹಾಗೂ 1961 ರ ಕಲಂ 17ರ ಬಿಡಿಎ ಕಾನೂನಿನ ಅನ್ವಯ ಜಾಗವನ್ನು ಖರೀದಿಸಿ ನಿವೇಶನಗಳ ರೂಪದಲ್ಲಿ ಟೌನ್ ಶಿಪ್ ಗಳನ್ನು ಮಾಡಿ ಮಾರಾಟ ಮಾಡಬಹುದಾಗಿದೆ ಎಂದು ಸ್ಪಷ್ಟಪಡಿಸಿರುವ ಬಿಡಿಎ, ಆದರೆ ಮೆ. ಗ್ರಾನೈಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯೂ ಬಿಡಿಎ ಕಚೇರಿಯಿಂದ ಯಾವುದೇ ಅಧಿಕೃತ ಪರವಾಗಿನಿಗೆಯನ್ನು ಪಡೆದಿಲ್ಲ ಎಂದು ಹೇಳಿದೆ.

ಈ ಕಂಪನಿ ಯೊರೋಪಿಯನ್ ಟೌನ್ ಶಿಪ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲು ಬಿಡಿಎ ದಿಂದ ಯಾವುದೇ ಪರವಾನಿಗೆ ಪಡೆಯದ ಹಿನ್ನೆಲೆಯಲ್ಲಿ ಇದೊಂದು ಗೋಲ್ ಮಾಲ್ ಕಂಪನಿಯಾಗಿದೆ. ಜನತೆಯು ಮೋಸ ಮಾಡುವ ಕಂಪನಿಯ ಜೊತೆಗೆ ವ್ಯವಹರಿಸಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಕಂಪನಿಯೂ ಮಾರಾಟ ಮಾಡುತ್ತಿರುವ ಜಾಗ ಬಿಡಿಎ ಸ್ವತ್ತಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಜಾಗವನ್ನು ವಶಪಡಿಸಿಕೊಳ್ಳಬಹುದು ಎಂದು ಬಿಡಿಎ ಎಚ್ಚರಿಕೆ ನೀಡಿದೆ. ಬಿಡಿಎ ಪರವಾನಿದೆ ನೀಡಿರುವ ಲೇಔಟ್ ಗಳ ವಿವರವನನ್ನು ಬಿಡಿಎ ವೆಬ್ ಸೈಟ್ ನಲ್ಲಿ ನೋಡಬಹುದಾಗಿದೆ ಎಂದು ತಿಳಿಸಿದೆ. (http://www.bdabangalore.org/)

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+