ಒರಿಸ್ಸಾ ಹತ್ಯಾಕಾಂಡ : ಸಂಘ ಪರಿವಾರದ ಪ್ರತಿಭಟನೆ
ಹುಬ್ಬಳ್ಳಿ, ಆ.30: ರಾಜ್ಯದಾದ್ಯಂತ ಕ್ರೈಸ್ತ ಮಿಷನರಿಗಳು ಸುಮಾರು 2200 ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಸಂಘ ಪರಿವಾರದವರು ಕ್ರೈಸ್ತರ ಪ್ರತಿಭಟನೆಗೆ ಪ್ರತಿಯಾಗಿ ತಾವೂ ಮೆರವಣಿಗೆ ನಡೆಸಿದರು.
ಒರಿಸ್ಸಾದಲ್ಲಿ ವಿಎಚ್ ಪಿ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಸ್ವಾಮಿ ಹಾಗೂ ಸಹಚರರಹತ್ಯೆಯನ್ನು ಖಂಡಿಸಿ, ಮೆರವಣಿಗೆ ಮಾಡುತ್ತಿದ್ದೇವೆ.ಕ್ರೈಸ್ತ ಸಂಘಟನೆಗಳು ಶಾಲೆ ಕಾಲೇಜಿಗೆ ರಜೆ ನೀಡಿರುವ ಕ್ರಮ ಸರಿಯಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರು ತೆಗೆದುಕೊಂಡ ನಿರ್ಣಯ ಸಮರ್ಥನೀಯವಾಗಿದೆ ಎಂದು ವಿಎಚ್ ಪಿ ಮುಖಂಡರು ಹೇಳಿದರು. ಬಿಜೆಪಿ ಯುವಮೋರ್ಚಾ ,ಬಂಜರಂಗ ದಳ ಹಾಗೂ ವಿಎಚ್ ಪಿಯ ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಹುಬ್ಬಳ್ಳಿಯಲ್ಲಿ ಪ್ರತಿಭಟನೆಯಿಂದ ಪ್ರೇರಣೆ ಪಡೆದು, ಇಂದು ಚಿಕ್ಕಮಗಳೂರಿನಲ್ಲಿ ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕ್ರೈಸ್ತ ಪಾದ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೂಡಿಗೆರೆಯಲ್ಲೂ ಕೂಡ ಪ್ರತಿಭಟನೆ ಮುಂದುವರೆದಿದ್ದು, ಸೈಂಟ್ ಮಾರ್ಥಾಸ್ ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಒರಿಸ್ಸಾ ಹತ್ಯಾಕಾಂಡ
ವಿಶ್ವ ಹಿಂದು ಪರಿಷತ್ ಮುಖಂಡ ಲಕ್ಷ್ಮಣಾನಂದ ಸರಸ್ವತಿ ಸ್ವಾಮಿ ಹಾಗೂ ಅವರ ನಾಲ್ವರು ಅನುಯಾಯಿಗಳನ್ನು 30 ಜನರ ತಂಡವೊಂದು ಅವರ ಆಶ್ರಮಕ್ಕೆ ತೆರಳಿ ಬೀಕರವಾಗಿ ಹತ್ಯೆ ಮಾಡಿತ್ತು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದುಪರ ಸಂಘಟನೆಗಳು ಉಗ್ರ ಪ್ರತಿಭಟನೆ ಇಳಿದಿದ್ದಾರೆ. ಕ್ರಿಶ್ಚಿಯನ್ ಸಂಸ್ಥೆಗಳು, ಚರ್ಚೆಗಳ ಮೇಲೆ ಅನೇತ ದಾಳಿಗಳು ನಡೆದಿದ್ದು, ಹಿಂಸಾಚಾರಕ್ಕೆ ಇಲ್ಲಿಯವರೆಗೂ ಹತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಿಂಸಾಚಾರದಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರನ್ನು ಜೀವಂತ ದಹನ ಮಾಡಲಾಗಿತ್ತು.
(ದಟ್ಸ್ ಕನ್ನಡವಾರ್ತೆ)
ರಜೆ ಘೋಷಿಸಿದ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ












Click it and Unblock the Notifications