ಒರಿಸ್ಸಾ ಗಲಭೆ ವಿರೋಧಿಸಿ ಎಂಜಿ ರಸ್ತೆಯಲ್ಲಿ ಪ್ರತಿಭಟನೆ

ಬೆಂಗಳೂರು, ಆ.29: ಒರಿಸ್ಸಾ ಗಲಭೆಯಲ್ಲಿ ಕ್ರಿಶ್ಚಿಯನ್ನರ ಹತ್ಯೆಯನ್ನು ಖಂಡಿಸಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಶುಕ್ರವಾರ(ಆ.29) ಸಂಜೆ 4.30 ರಿಂದ 7 ಗಂಟೆಯವರೆಗೂ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿವೆ. ಸಂಜೆ 6 ಗಂಟೆಗೆ ದೀಪವನ್ನು ಬೆಳಗುವ ಮೂಲಕ ಪ್ರತಿಭಟನೆ ಅಂತ್ಯವಾಗಲಿದೆ.

ಪ್ರತಿಭಟನೆಯಲ್ಲಿ ಖ್ಯಾತ ಪತ್ರಕರ್ತ ಹಾಗೂ ಮಾಜಿ ರಾಜ್ಯಸಭೆ ಸದಸ್ಯ ಕುಲದೀಪ್ ನಯ್ಯರ್, ಹಿರಿಯ ವಕೀಲ ರವಿವರ್ಮ ಕುಮಾರ್, ವಿಚಾರವಾದಿ ಜಿಕೆ ಗೋವಿಂದರಾವ್, ಸಿಪಿಎಂನ ಎಸ್.ವೈ.ಗುರುಶಾಂತ್, ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಮುಂತಾದವರು ಭಾಗವಹಿಸಿ ಮಾತನಾಡಲಿದ್ದಾರೆ.

ದೀಪವನ್ನು ಬೆಳಗುವ ಮೂಲಕ ಒರಿಸ್ಸಾ ಗಲಭೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಲಾಗುತ್ತದೆ. ಪ್ರತಿಭಟನೆಯ ವೇಳೆ ಹಿಂಸೆ,ಗಲಭೆ, ಕೊಲೆ, ಸುಲಿಗೆ, ಮಾನವರ ಜೀವಂತ ದಹನ ದಂತಹ ಹೀನ ಕೃತ್ಯಗಳನ್ನು ಖಂಡಿಸಲಾಗುತ್ತದೆ ಎಂದು ಪ್ರತಿಭಟನೆ ಹಮ್ಮಿಕೊಂಡಿರುವ ಸಂಘಟನೆಗಳು ದಟ್ಸ್‌ಕನ್ನಡಕ್ಕೆ ತಿಳಿಸಿವೆ.

ಪ್ರತಿಭಟನೆಯಲ್ಲಿ ಭಾರತೀಯ ವಿದ್ಯಾರ್ಥಿ ಪರಿಷತ್ (ಎಸ್‌ಎಫ್‌ಐ), ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಬಹುಜನ ಸಮಾಜ ಯುವ ಸಂಘ, ಸಿಪಿಐ(ಎಂ), ಕ್ರೈಸ್ತ ವಿದ್ಯಾರ್ಥಿ ಸಂಘಟನೆ, ಸೇಂಟ್ ಆನ್ಸ್, ಕ್ರೈಸ್ಟ್ ಕಾಲೇಜು, ಸೇಂಟ್ ಜೋಸೆಫ್ ಪದವಿ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)
ಒರಿಸ್ಸಾ: ಹಿಂದು-ಕ್ರೈಸ್ತರ ಗಲಭೆ, ನಿಷೇಧಾಜ್ಞೆ, 10 ಸಾವು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+