ವಿಮಾನ ದುರಂತ ಬೆಂಗಳೂರಿನ ಪೈಲೆಟ್ ಸಾವು
ಸಿಡ್ನಿ, ಆ. 29 : ಮೆಲ್ಬೂರ್ನ್ ಉಪವಲಯದ ನಿರ್ಜನ ಚೆಲ್ತಾನಂ ಪ್ರದೇಶದಲ್ಲಿ ಸಂಭವಿಸಿದ ಎರಡು ವಿಮಾನಗಳ ದುರಂತದಲ್ಲಿ ಬೆಂಗಳೂರಿನ ಪೈಲೆಟ್ ಒಬ್ಬರು ಮೃತಪಟ್ಟಿರುವ ಘಟನೆ ಬುಧವಾರ ಜರುಗಿದೆ.
ಆಕಾಶ್ ಅನಂತ್ (24) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅನಂತ್ ತರಬೇತಿ ಪಡೆದು ಚಲಾಯಿಸಿದ ಮೊದಲ ವಿಮಾನವೇ ದುರಂತಕ್ಕೀಡಾಗಿದೆ. ಅನಂತ್ ಸಾವಿನಲ್ಲೂ ಸಮಯ ಪ್ರಜ್ಞೆ ಮೆರೆದಿದ್ದು, ತಾವಿದ್ದ ವಿಮಾನವನ್ನು ನಿರ್ಜನ ಪ್ರದೇಶದಲ್ಲಿ ಪತನಗೊಳಿಸಿದ್ದರಿಂದ ಹತ್ತಿರದಲ್ಲೇ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ 220 ಮಕ್ಕಳು ಹಾಗೂ ನಿವಾಸಿಗಳ ಜೀವ ಉಳಿಸಿದ್ದಾನೆ. ಹೀಗಾಗಿ ಸಾವಿನಲ್ಲೂ ಹೀರೋ ಆಗಿ ಮೆರೆದಿದ್ದಾನೆ ಎಂದು ಪತ್ರಿಕೆಗಳು ಪ್ರಶಂಸಿವೆ.
ಅನಂತ್ ವಾಯುಯಾನ ವಿದ್ಯಾರ್ಥಿಯಾಗಿದ್ದು, ಆಸ್ಟ್ರೇಲಿಯಾದ ರಾಯಲ್ ವಿಕ್ಟೋರಿಯಾ ಏರೋ ಕ್ಲಬ್ ನಲ್ಲಿ ತರಬೇತಿ ಪಡೆಯುತ್ತಿದ್ದರು. ಅವರಿಗೆ ತರಬೇತಿ ನೀಡಿದ್ದ ಪೈಲೆಟ್ ಗಳು ಪ್ರಯಾಣಿಸುತ್ತಿದ್ದ ಮತ್ತೊಂದು ವಿಮಾನ ಮೋರಾಬಿನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ.ವಿಮಾನ ದುರಂತದ ಬಗ್ಗೆ ತನಿಖೆ ಮುಂದುವರೆದಿದೆಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮ್ಯಾಡ್ರಿಡ್ ವಿಮಾನ ಅಪಘಾತದಲ್ಲಿ 153 ಸಾವು












Click it and Unblock the Notifications