ವಿಷಕಾರಕ ಬಿಸಿಯೂಟ ಸೇವನೆ : 30 ವಿದ್ಯಾರ್ಥಿಗಳು ಅಸ್ವಸ್ಥ
ಶಿವಮೊಗ್ಗ, ಆ. 28 : ವಿಷಕಾರಕ ಬಿಸಿಯೂಟವನ್ನು ಸೇವಿಸಿದ ನಗರದ ಸರ್ಕಾರಿ ಶಾಲೆಯ 32 ಕ್ಕೂ ಅಧಿಕ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಗುರುವಾರ ನಡೆದಿದೆ.
ನಗರದ ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅವಾಂತರ ನಡೆದಿದ್ದು, 32 ಕ್ಕೂ ಅಧಿಕ ಮಕ್ಕಳ ತೀವ್ರ ಅಸ್ವಸ್ಥರಾಗಿದ್ದಾರೆ. ಅಸ್ವಸ್ತರಾಗಿರುವ ವಿದ್ಯಾರ್ಥಿಗಳನ್ನು ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳು ಗುಣಮುಖರಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಬಿಸಿಯೂಟ ಅಡಿಗೆ ತಯಾರಕರ ನಿರ್ಲಕ್ಷ್ಯಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಬಿಸಿಯೂಟಕ್ಕೆ ಮೇಲ್ವಿಚಾರಕರ ಕಾಳಜಿಯಿಂದ ನಿರ್ವಹಿಸಿದರೆ ಇಂಥ ಅನಾಹುತಗಳು ನಡೆಯುವುದಿಲ್ಲ. ಆದರೆ ಕಾಟಚಾರಕ್ಕೆ ಮಕ್ಕಳಿಗೆ ಊಟ ಒದಗಿಸಬೇಕು ಎನ್ನುವ ಮನೋಭಾವದಿಂದ ಇಂಥ ಅವಘಡಗಳು ನಡೆಯುತ್ತವೆ. ಸರ್ಕಾರ ಇಂತಹ ಘಟನೆಗಳು ನಡೆಯದಂತೆ ಸೂಕ್ತ ನಿರ್ದೇಶನ ನೀಡಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲಾ ಸಿಬ್ಬಂದಿಗೆ ಬಿಸಿಯೂಟದ ಶಿಸ್ತಿನ ಬಗ್ಗೆ ಕಟ್ಟಪ್ಪಣೆ ವಿಧಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತವಾಗಿಯೂ ವಿಧಿಸಬೇಕು. ಇಲ್ಲವಾದಲ್ಲಿ ಅಮಾಯಕ ಮಕ್ಕಳ ಜೀವದ ಜೊತೆಗೆ ಆಟವಾಡುವ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ನೊಂದ ಪೋಷಕರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ನವೋದಯ ಶಾಲೆಯ 50ಮಕ್ಕಳು ಅಸ್ವಸ್ಥ
ಮಣಿಪಾಲ್ ಫೌಂಡೇಶನ್ ನಿಂದ ಅಕ್ಷಯ ಪಾತ್ರೆಗೆ ಧನ












Click it and Unblock the Notifications