ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕ್ಕ'ನ ಕರೆಗೆ ಕಡೆಗೂ ಓಗೊಟ್ಟ ಶೋಭಕ್ಕ

By Staff
|
Google Oneindia Kannada News

ಬೆಂಗಳೂರು, ಆ. 27 : ತೀವ್ರ ಟೀಕೆ ಟಿಪ್ಪಣಿಗಳ ನಡುವೆ ಅಮೆರಿಕದ ಶಿಕಾಗೋ ನಗರದಲ್ಲಿ ಆ. 29 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಕ್ಕ ಸಮ್ಮೇಳನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಸಚಿವರು, ವಿವಿಧ ಕ್ಷೇತ್ರ ಕಲಾವಿದರು, ಅಧಿಕಾರಿ ವರ್ಗ ಬುಧವಾರ ರಾತ್ರಿ ಅಮೆರಿಕಕ್ಕೆ ಪ್ರಯಾಣ ಬೆಳಸಲಿದೆ. ಹಾಗೆಯೇ ದಸರಾ ನೆಪವೊಡ್ಡಿ ಸಮ್ಮೇಳನಕ್ಕೆ ತೆರಳುವುದಿಲ್ಲ ಎಂದು ಘೋಷಿಸಿದ್ದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅಮೆರಿಕಕ್ಕೆ ತೆರಳುವ ವಿಮಾನವೇರಲು ಸಜ್ಜಾಗಿರುವುದು ವಿಶೇಷವಾಗಿದೆ.

ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾತ್ರ ಅಧಿಕೃತ ಆಹ್ವಾನವಿದೆ. ಆದರೆ ಉಳಿದ ಸಚಿವರಿಗೆ, ಅಧಿಕಾರ ವರ್ಗಗಳಿಗೆ ಆಮಂತ್ರಣವಿರುವ ಬಗ್ಗೆ ಸ್ಪಷ್ಟವಾಗಿಲ್ಲ. ಮುಖ್ಯಮಂತ್ರಿ ಸೇರಿ ಎಲ್ಲರೂ ಸ್ವಂತ ಖರ್ಚಿನಲ್ಲಿ ಅಮೆರಿಕಕ್ಕೆ ತೆರಳಬೇಕಿದೆ. ಸರ್ಕಾರಿ ಹಣವನ್ನು ಮೋಜು ಮಾಡಲು ಬಳಸಬಾರದು ಎಂದು ಹೈಕೋರ್ಟ್ ಕಿವಿ ಮಾತು ಹೇಳಿದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳುತ್ತಿರುವ ಎಲ್ಲರೂ ಸ್ವಂತ ಖರ್ಚಿನಲ್ಲಿ ತೆರಳುತ್ತಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮಂತ್ರಿ ಮಹೋದಯರು ಅಕ್ಕ ಸಮ್ಮೇಳನ ನೆಪದಲ್ಲಿ ಸರ್ಕಾರಿ ಹಣವನ್ನು ಪೋಲು ಮಾಡುವುದನ್ನು ತಡೆಯಬೇಕು ಎಂದು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಅಕ್ಕ ಸಮ್ಮೇಳನಕ್ಕೆ ತೆರಳುವ ಕುರಿತಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಶಿಕಾಗೋದಲ್ಲಿ ನಡೆಯುತ್ತಿರುವ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ತೆರಳದಿರಲು ನಿರ್ಧರಿಸಿದ್ದರು. ಅಮೆರಿಕಕ್ಕೆ ತೆರಳುವ ಶಾಸಕರ ಮೊದಲ ಪಟ್ಟಿಯಲ್ಲಿಯೂ ಶೋಭಾ ಕರಂದ್ಲಾಜೆ ಅವರ ಹೆಸರು ಇರಲಿಲ್ಲ. ಆದರೆ, ಮುಖ್ಯಮಂತ್ರಿಗಳ ಆಪ್ತರು ಎಂಬ ಕಾರಣಕ್ಕಾಗಿ ಶೋಭಾ ಸೇರಿದಂತೆ ಇನ್ನೂ ಕೆಲವರ ಹೆಸರನ್ನು ನಂತರ ಸೇರಿಸಲಾಗಿತ್ತು. ದಸರಾ ಹಬ್ಬವೂ ಹೊಸ್ತಿಲಲ್ಲೇ ಇರುವುದರಿಂದ ಅದರ ಆಚರಣೆಗೆ ಸಿದ್ಧತೆ ಮಾಡಬೇಕಾಗಿರುವ ಕಾರಣ ನೀಡಿ ಶೋಭಾ ಶಿಕಾಗೋ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಇದೀಗ ಅಮೆರಿಕ ವಿಮಾನ ಏರಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳ ಅಭಿವೃದ್ಧಿಯ ಮುಂಚೂಣೆಯಲ್ಲಿರುವವರು ಭಾರತೀಯರು. ನಮ್ಮ ತಂತ್ರಜ್ಞರು ಅಪಾರ ಬುದ್ಧಿಶಾಲಿಗಳು, ಅಂಥ ಬೌದ್ಧಿಕ ಶಕ್ತಿ ಹೊಂದಿದ ನಾವುಗಳು ಏಕೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಬೇಕು ಎಂದುಕೊಂಡಿರುವೆ. ಪ್ರತಿಭಾವಂತರು ಭಾರತಕ್ಕೆ ವಾಪಸ್ಸು ಬಂದು ತಮ್ಮ ಪ್ರತಿಭೆಯನ್ನು ತೋರಿಸಿ ಈ ದೇಶವನ್ನು ಪಾಶ್ಚಾತ್ಯ ರಾಷ್ಟ್ರಗಳ ಮಟ್ಟಕ್ಕೆ ಅಭಿವೃದ್ಧಿಪಡಿಸಿ ಎಂದು ಮುಖ್ಯಮಂತ್ರಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅವರ ಆಶಯ ಈಡೇರಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

(ದಟ್ಸ್ ಕನ್ನಡ ವಾರ್ತೆ)

ಅಕ್ಕ ಸಮ್ಮೇಳನ : ಶಾಸಕರಿಗೆ ಹೈಕೋರ್ಟ್ 'ವೀಸಾ'
ಯಡಿಯೂರಪ್ಪ ಮುಂದೆ, ಶೋಭಾ ಕರಂದ್ಲಾಜೆ ಹಿಂದೆ!
ಶಾಸಕರ ಅಮೆರಿಕ ಪ್ರವಾಸ ಪ್ರಶ್ನಿಸಿ ರಿಟ್ ಅರ್ಜಿ
ಯಡಿಯೂರಪ್ಪ ಅಮೆರಿಕಾ ಪ್ರವಾಸ ದಿನಚರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X