ಒಲಿಂಪಿಕ್ಸ್ ಸಮಾರೋಪ: ವಿಜೇಂದರ್ ಕೈಗೆ ದೇಶದ ಧ್ವಜ

ಬೀಜಿಂಗ್, ಆ. 24 : ಇಂದು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಂತಿಮ ತೆರೆ ಬೀಳಲಿದೆ. ಪ್ರಥಮ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಕಂಚು ಪದಕವನ್ನು ಗಳಿಸಿ ಇತಿಹಾಸವನ್ನು ಸೃಷ್ಟಿಸಿರುವ ಭಿವಾನಿಯ ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೆ ಭಾರತದ ಧ್ವಜ ಹಿಡಿದು ಮುನ್ನಡೆಯುವ ಭಾಗ್ಯ ಲಭಿಸಿದೆ.

ಭಾರತೀಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಾಕ್ಸಿಂಗ್ ನಲ್ಲಿ ಕಂಚು ಪದಕ ಗಳಿಸುವ ಮೂಲಕ ವಿಶಿಷ್ಟ ದಾಖಲೆ ಮಾಡಿರುವ ವಿಜೇಂದರ್ ಕುಮಾರ್ ಅವರಿಗೆ ಅಂತಿಮ ದಿನವಾದ ಇಂದು ಭಾರತದ ತ್ರಿವರ್ಣ ದ್ವಜ ಮುನ್ನೆಡೆಸುವ ಅವಕಾಶವನ್ನು ಕಲ್ಪಿಸಲಾಗಿದೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ತಿಳಿಸಿದೆ. ಅಥೇನ್ಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಕಂಚು ಪದಕ ತಂದುಕೊಟ್ಟಿದ್ದ ರಾಜ್ಯವರ್ಧನ್ ಸಿಂಗ್ ರಾಠೋಡ್ ಆ. 8 ರಂದು ಬೀಜಿಂಗ್ ನಲ್ಲಿ ಆರಂಭವಾದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಮುನ್ನೆಡೆಯುವ ಅವಕಾಶವನ್ನು ಪಡೆದುಕೊಂಡಿದ್ದರು.

ಅಭಿನವ್ ಬಿಂದ್ರಾ ಶೂಟಿಂಗ್ ವಿಭಾಗದಲ್ಲಿ ಚಿನ್ನದಪದಕ, ಕುಸ್ತಿಯಲ್ಲಿ ಸುಶೀಲ್ ಕುಮಾರ್ ಕಂಚು ಹಾಗೂ ವಿಜೇಂದರ್ ಕುಮಾರ್ ಭಾರತಕ್ಕೆ ಪ್ರಪ್ರಥಮ ಬಾರಿಗೆ ಬಾಕ್ಸಿಂಗ್ ಪಂದ್ಯದಲ್ಲಿ ಕಂಚು ಪದಕವನ್ನು ಪಡೆದು ಕೀರ್ತಿ ಪತಾಕೆ ಹಾರಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಒಲಿಂಪಿಕ್ಸ್: ಕಂಚಿಗೆ ತೃಪ್ತಿಪಟ್ಟ ಬಾಕ್ಸರ್ ವಿಜೇಂದರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+