ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟಕ್ಕೆರಾಜೀನಾಮೆ ಜನಾರ್ದನರೆಡ್ಡಿ ಇಂಗಿತ ?

By Staff
|
Google Oneindia Kannada News

Janardhan reddyಬೆಂಗಳೂರು, ಆ. 24 : ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಕೆಲ ಸಚಿವರಿಂದ ಬಲವಂತದ ರಾಜೀನಾಮೆ ಪಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದ ಖ್ಯಾತಿಯ ಗಣಿಧಣಿ ಜಿ.ಜನಾರ್ದನರೆಡ್ಡಿ ಅವರು ತಮ್ಮ ಪ್ರವಾಸೋಧ್ಯಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿದೆ.

ತಮ್ಮ ವ್ಯವಹಾರದ ಕಾರ್ಯದೊತ್ತಡದಿಂದಾಗಿ ಸಚಿವ ಸ್ಥಾನವನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಜನಾರ್ದನರೆಡ್ಡಿ ರಾಜೀನಾಮೆ ನೀಡುವ ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಸೇರುವವರಿಗಾಗಿ ರೆಡ್ಡಿ ಅವರು ಸಚಿವ ಹುದ್ದೆಬಿಟ್ಟುಕೊಟ್ಟಿದ್ದಾರೆ. ಸಚಿವ ಸ್ಥಾನ ತ್ಯಾಗ ಮಾಡಿ ಇತರರಿಗೆ ಮಾದರಿಯಾಗುವ ಉದ್ದೇಶವಿದೆ. ಶತಾಯಗತಾಯ ಪ್ರಯತ್ನಿಸಿ ಬಿಜೆಪಿ ಅಧಿಕಾರಕ್ಕೆ ತಂದು ನಿಲ್ಲಿಸಿರುವ ರೆಡ್ಡಿ, ಇದೀಗ ಪಕ್ಷಾಂತರಿಗಳಿಗೆ ಜಾಗ ಕಲ್ಪಿಸುವ ನೆಪದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತ್ಯಾಗಮಯಿ ಎಂದು ಕರೆಸಿಕೊಳ್ಳುವ ಇರಾದೆ ಹೊಂದಿದ್ದಾರೆ. ಸ್ವಾಮಿ ಕಾರ್ಯ ಸ್ವಕಾರ್ಯ ಎರಡು ಆಗಲಿವೆ. ಇದರಿಂದ ತಮ್ಮ ಇಮೇಜು ಮತ್ತಷ್ಟು ಹೆಚ್ಚುವ ಸಾಧ್ಯತೆ ಎಂದು ರೆಡ್ಡಿ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ.

ಸಚಿವ ಹುದ್ದೆ ಹಾಗೂ ಗಣಿಗಾರಿಕೆ ವ್ಯವಹಾರ ಮತ್ತು ರಾಜಕೀಯ ಏಕಕಾಲದಲ್ಲಿ ಮಾಡಲು ಸಮಯ ಆಭಾವ ಉಂಟಾಗಿದೆ. ಸಚಿವ ಸ್ಥಾನ ಮಹತ್ವದ್ದು ಎಂದು ತಿಳಿದಿದ್ದರೂ ಕ್ರಿಯಾಶೀಲವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಆದ್ದರಿಂದ ರೆಡ್ಡಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಬೆಳ್ಳುಬ್ಬಿಗೆ ಕೊಕ್ : ಬಸವನ ಬಾಗೇವಾಡಿಯಲ್ಲಿ ಪ್ರತಿಭಟನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X