ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್ ಸಿಎಂ ಮಧು ಕೊಡಾ ರಾಜೀನಾಮೆ

By Staff
|
Google Oneindia Kannada News

ಜಾರ್ಖಂಡ್, ಆ. 24 : ಮುಖ್ಯಮಂತ್ರಿ ಸ್ಥಾನಕ್ಕೆ ಮಧು ಕೊಡಾ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜೆಎಂಎಂ ಪಕ್ಷ ನಾಯಕ ಶಿಬು ಸೋರೆನ್ ಇಂದು ಮುಖ್ಯಮಂತ್ರಿ ಪೀಠ ಅಲಂಕರಿಸಲಿದ್ದಾರೆ ಎಂದು ಮೂಲಗಳಉ ತಿಳಿಸಿವೆ.

ಶನಿವಾರ ಸಂಜೆ ರಾಜ್ಯಪಾಲ ಸಯ್ಯದ್ ಶಿಬ್ತೆ ರಜಿ ಅವರಿಗೆ ಮುಖ್ಯಮಂತ್ರಿ ಮಧು ಕೊಡಾ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಅಲ್ಲದೇ ಆ. 25 ರಂದು ವಿಶ್ವಾಸಮತ ಪ್ರದರ್ಶಿಸಲು ಅಸಕ್ತರಾಗಿರುವುದಾಗಿ ಮಧು ಕೊಡಾ ರಾಜ್ಯಪಾಲರಿಗೆ ತಿಳಿಸಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ನೀಡಿದ್ದರೂ ಮಧು ಕೊಡಾ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದರು. ವಿಶ್ವಾಸಮತ ಎದುರಿಸಲು ಸಂಖ್ಯೆಗಳ ಕೊರತೆ ಕಾಡುತ್ತಿರುವ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.

ನೂತನವಾಗಿ ಅಧಿಕಾರಕ್ಕೆ ಬರಲಿರುವ ಶಿಬು ಸೋರೆನ್ ಸರ್ಕಾರಕ್ಕೆ ತಾವು ಯಾವುದೇ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಮಧು ಕೊಡಾ, ಮುಂದಿನ ದಿನಗಳಲ್ಲಿ ಗುರೂಜಿ ಸರ್ಕಾರ ಸಮಸ್ಯೆಯ ಸುಳಿಯಲ್ಲಿ ಸಿಲುಕುವುದರಲ್ಲಿ ಅನುಮಾನವಿಲ್ಲ ಎಂದು ಎಚ್ಚರಿಸಿದ್ದಾರೆ. ತಾವು ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಚುನಾವಣೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಅವರು ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ನವದೆಹಲಿಯಿಂದ ಆಗಮಿಸಿರುವ ಶಿಬು ಸೋರೆನ್ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಜಾರ್ಖಂಡ್: ಅತಂತ್ರವಾದ ಮಧು ಕೊಡಾ ಸರ್ಕಾರ
ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ : ಶಿಬು
ಆ. 25 ರಂದು ವಿಶ್ವಾಸಮತ ಯಾಚನೆ : ಮಧು ಕೊಡಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X