ಬಿಜಾಪುರದಲ್ಲಿ ಬಸವರಾಜ್ ಎಂಬ ಬಕಾಸುರನ ಬಂಧನ
ಬೆಂಗಳೂರು, ಆ. 23 : ಆಹಾರಧಾನ್ಯ ಪೂರೈಸಲು ಲಂಚ ಕೇಳಿದ ಬಿಜಾಪುರ ಜಿಲ್ಲೆಯ ಆಹಾರ ಇಲಾಖೆಯ 'ಬಕಾಸುರ' ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಲಂಚ ಕೇಳುತ್ತಿದ್ದ ಆರೋಪ ಬಂದ ಮೇರೆಗೆ ಅತ್ಯಂತ ವ್ಯವಸ್ಥಿತವಾಗಿ ಜಾಲ ಬೀಸಿದ ಲೋಕಾಯುಕ್ತ ಪೊಲೀಸರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಸಹಾಯಕ ಅಧಿಕಾರಿಯಾಗಿದ್ದ ಬಸವರಾಜ್ ಪರಪ್ಪ ಶೆಟಗಾರ್ ಎಂಬುವವರನ್ನು ಬಂಧಿಸಿರುವುದಾಗಿ ಲೋಕಾಯುಕ್ತ ತನ್ನ ಪತ್ರಿಕಾ ಹೇಳಿಕೆಯಲ್ಲಿ ಶನಿವಾರ ತಿಳಿಸಿದೆ.
ರೇಷನ್ ಅಂಗಡಿ ಮಾಲಿಕ ಮಹೇಶ್ ನಿಂಗಪ್ಪ ಹಿಪ್ಪರಗಿ ಎಂಬುವವರಿಗೆ ಆಹಾರಧಾನ್ಯ ಪೂರೈಸಲು ಬಸವರಾಜ್ ಶೆಟಗಾರ್ 5000 ರು. ಲಂಚ ಕೇಳಿದ್ದ. ಹಿಪ್ಪರಗಿ ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದರು. ವ್ಯವಸ್ಥಿತ ಜಾಲ ಬೀಸಿದ ಲೋಕಾಯುಕ್ತ ಪೊಲೀಸರು ಶೆಟಗಾರ್ ನನ್ನು ಲಂಚ ಸ್ವೀಕರಿಸುತ್ತಿದ್ದಾಗಲೇ ಬಂಧಿಸಿದ್ದಾರೆ.
(ಯುಎನ್ಐ)












Click it and Unblock the Notifications