ಗ್ರಾಮೀಣ ಭಾಗದಲ್ಲಿ ಬಿಪಿಒ ಸ್ಥಾಪನೆ: ಯಡಿಯೂರಪ್ಪ
ಬೆಂಗಳೂರು, ಆ. 20 : ಅರೆಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾವಂತ ಯುವಜನರಿಗೆ ಉದ್ಯೋಗವಕಾಶ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು ವಿಶೇಷ ಪ್ಯಾಕೇಜ್ ರೂಪಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಪ್ರಸಕ್ತ ವರ್ಷದ 11ನೇ ಮಾಹಿತಿ ತಂತ್ರಜ್ಞಾನ ಮೇಳ ಬೆಂಗಳೂರು ಐಟಿ ಡಾಟ್ ಕಾಮ್ 2008 ಕುರಿತ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮಾಂತರ ಬಿಪಿಓ ಮೂಲಕ ಐಟಿ ಸಂಬಂಧಿ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತಗೆದುಕೊಳ್ಳಲಿದೆ ಎಂದು ಹೇಳಿದರು.
ಕೈಗಾರಿಕೆಯಲ್ಲಿ ಹಿಂದುಳಿದ ತಾಲ್ಲೂಕುಗಳಲ್ಲಿ ಐಟಿ ಹೂಡಿಕೆಗೆ ಮುಂದಾದರೆ ಮುಂದ್ರಾಂಕ ಶುಲ್ಕ ವಿನಾಯಿತಿ, ನೋಂದಣಿ ಶುಲ್ಕ ರಿಯಾಯಿತಿ ಮತ್ತು ಪರಿವರ್ತನೆ ಶುಲ್ಕ ಮನ್ನಾ ಮಾಡಲಾಗುವುದು ಹೇಳಿದರು. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಶಿಮಮೂಗ್ಗ, ಮಂಗಳೂರು, ಮೈಸೂರು ಮತ್ತು ಗುಲ್ಬರ್ಗಾ ಖಾಸಗಿ ಸಹಭಾಗಿತ್ವದಲ್ಲಿ ಐಟಿ. ಬಿಟಿ ವಲಯಗಳನ್ನು ಸ್ಪಾಪಿಸಲಾಗುವುದು ಎಂದು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications