ಪುಣೆಯ ಐಟಿ ಬೆಳೆಗಾರರು ಆತ್ಮಹತ್ಯೆಗೆ ಶರಣು
ಪುಣೆ, ಆ. 20 : ಭಾರತದ ನಾನಾ ರಾಜ್ಯಗಳಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಲೇ ಇರುವುದನ್ನು ನಾವೆಲ್ಲ ಓದುತ್ತಿರುತ್ತೇವೆ. ಅದರಲ್ಲೂ ರೈತರ ಆತ್ಮಹತ್ಯೆಗೆ ಕುಖ್ಯಾತಿಯಾದ ರಾಜ್ಯ ಮಹಾರಾಷ್ಟ್ರ. ರಾಜ್ಯದ ವಿದರ್ಭ ಪ್ರಾಂತ್ಯದ ಹತ್ತಿ ಬೆಳೆಗಾರರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ಅಪಾರವಾಗಿವೆ.
ಈಗ ಇದೇ ರಾಜ್ಯದಲ್ಲಿ ಐಟಿ ಕಾರ್ಮಿಕರು ಆತ್ಮಹತ್ಯೆಯ ಬಳಿಸಾರುತ್ತಿರುವ ಸುದ್ದಿಗಳು ಬರುತ್ತಿವೆ. ಆಗಸ್ಟ್ 19 ರ ಮಂಗಳವಾರ ಐಟಿ ಕಾರ್ಮಿಕ ಸರೋಜ್ ನಾಯಕ್ ಎಂಬಾತ ಇಲ್ಲಿನ ಹಿಂಜವಾಡಿ ಐಟಿ ಪಾರ್ಕ್ ಹಿಂಬದಿಯಲ್ಲಿರುವ ಗುಡ್ಡದ ಮೇಲೆ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. 26 ವರ್ಷದ ಸರೋಜ್ ACS Ltd ಕಂಪನಿಯಲ್ಲಿ ಉದ್ಯೋಗಸ್ಥನಾಗಿದ್ದ. ಎಸಿಎಸ್ ಸಂಸ್ಥೆ ಟೆಕ್ ಮಹೀಂದ್ರ ಕಂಪನಿಯ ಕಾಂಟ್ರಾಕ್ಟ್ ಕೆಲಸ ಕೈಗೆತ್ತಿಕೊಳ್ಳುತ್ತದೆ.
ಐಟಿ ಕಾರ್ಮಿಕರ ಆತ್ಮಹತ್ಯೆಯ ಎರಡನೆ ಪ್ರಕರಣ ಇದಾಗಿದೆ. ಎರಡು ವಾರಗಳ ಹಿಂದಷ್ಟೆ ಸಂದೀಪ್ ಶೆಲ್ಕೆ ಎಂಬ ಐಟಿ ಹುಡುಗ ತಾನು ನೌಕರಿ ಮಾಡುತ್ತಿದ್ದ ಪುಣೆ ಕಚೇರಿ ಕಟ್ಟಡದ ಮೇಲಿನಿಂದ ಹಾರಿ ಪ್ರಾಣ ಬಿಟ್ಟಿದ್ದ. "ಕೆಲಸದ ಒತ್ತಡ ತಡೆಯಲಾರೆ" [I am unable to do my work well and very depressed because of it. That"s why taking this step,] ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications