ಒಲಿಂಪಿಕ್ಸ್ :ಭಾರತದ ಕುಸ್ತಿಪಟುವಿಗೆ ಕಂಚಿನ ಪದಕ

Susheel Kumar wins bronze in wrestling in Beijing Olympicsಬೀಜಿಂಗ್, ಆ. 20 : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿ ಪಟು ಸುಶೀಲ್ ಕುಮಾರ್ ಅವರು 66 ಕೆಜಿ ವಿಭಾಗದಲ್ಲಿ ಕಂಚು ಪದಕವನ್ನು ಪಡೆದಿದ್ದಾರೆ. ಈ ಮೂಲಕ ಭಾರತದ ಪರ ಎರಡನೇ ವೈಯಕ್ತಿಕ ಪದಕ ಪಡೆದ ಗೌರವಕ್ಕೆ ಸುಶೀಲ್ ಕುಮಾರ್ ಪಾತ್ರರಾಗಿದ್ದಾರೆ. ಭಾರತೀಯ ಕ್ರೀಡಾಪ್ರೇಮಿಗಳ ಪಾಲಿಗೆ ಇಂದು ಅತ್ಯಂತ ಸಂಭ್ರಮದ ದಿನವೆಂದೇ ಹೇಳಬಹುದು.

ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದ ನಂತರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ನೀರಸ ಪ್ರದರ್ಶನವನ್ನು ಮುಂದುವರೆಸಿದ್ದರು. ಇಂಥ ಕಠಿಣ ಸ್ಥಿತಿಯಲ್ಲಿ ಸುಶೀಲ್ ಕುಮಾರ್ ಕುಸ್ತಿ ಪಂದ್ಯದಲ್ಲಿ ಕಂಚಿನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಒಲಿಂಪಿಕ್ಸ್ ಅಂಗಳದಲ್ಲಿ ಹಾರಿಸಿದ್ದಾರೆ.

ಇಂದು ನಡೆದ ಪಂದ್ಯದಲ್ಲಿ ಕಝಕಿಸ್ತಾನದ ಕುಸ್ತಿ ಪಟು ಲೆಯೋನೆಡ್ ಸ್ಪಿರಿಡ್ ನೋವ್ ಅವರನ್ನು ಮಣಿಸುವ ಮೂಲಕ ಭಾರತದ ಸುಶೀಲ್ ಕುಮಾರ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕಕ್ಕೆ ಕೊರಳೊಡ್ಡಿದಂತಾಯಿತು. 56 ವರ್ಷಗಳ ನಂತರ ಭಾರತಕ್ಕೆ ಕುಸ್ತಿ ಪಂದ್ಯದಲ್ಲಿ ಪದಕವನ್ನು ಗಳಿಸಿಕೊಟ್ಟ ಹೆಗ್ಗಳಿಕೆಗೆ ಸುಶೀಲ್ ಪಾತ್ರರಾದರು. 1952ರ ಹೆಲ್ಸಿಂಕಿ ಒಲಿಂಪಿಕ್ಸ್ ನ ಕುಸ್ತಿ ಪಂದ್ಯದಲ್ಲಿ ಭಾರತದ ಕೆ.ಡಿ. ಜಾಧವ್ ಕಂಚಿನ ಪದಕ ಗಳಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಭಾರತದ ಬಾಕ್ಸರ್ ಗಳು ಕ್ವಾರ್ಟರ್ ಫೈನಲ್ ಗೆ ಸಜ್ಜು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+