ಭಾರತದ ಹಿರಿಯಜ್ಜ ಹಬೀಬ್ ಮಿಂಯಾ ಇನ್ನಿಲ್ಲ
ಜೈಪುರ, ಆ. 19 : ರಾಜಸ್ಥಾನದ ಜೈಪುರದಲ್ಲಿ ಬದುಕಿ ಬಾಳಿದ ಭಾರತದ ಅತಿಹೆಚ್ಚು ವಯೋವೃದ್ಧ ಹಬೀಬ್ (138) ಮಂಗಳವಾರ ಇಲ್ಲಿ ನಿಧನರಾದರು. ಅವರು ಜೈಪುರ ಅರಮನೆಯ ವಾದ್ಯವೃಂದದಲ್ಲಿ ತುತ್ತೂರಿ ನುಡಿಸುತ್ತಿದ್ದರು.
ಕೇವಲ ಭಾರತವಲ್ಲ, ಹಬೀಬ್ ಅವರು ಪ್ರಪಂಚದ ಅತ್ಯಂತ ಹಿರಿಯ ಜೀವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆದರೆ, ದಾಖಲೆಗಳ ಪ್ರಕಾರ ಹಬೀಬ್ ಅವರ ಅಧಿಕೃತ ವಯಸ್ಸು ಗಿನ್ನಿಸ್ ದಾಖಲೆಗೆ ಅವಶ್ಯವಾಗಿದ್ದ ವಯಸ್ಸಿಗಿಂತ 8 ವರ್ಷ ಕಡಿಮೆ ಇತ್ತು. ಇದೇ ಕಾರಣದಿಂದಾಗಿ ಗಿನ್ನಿಸ್ ಸಂಸ್ಥೆ ಅವರ ಹೆಸರನ್ನು ದಾಖಲು ಮಾಡಿರಲಿಲ್ಲ.
ಹಬೀಬ್ ಅವರ ಜನ್ಮನಾಮ ರಹೀಂ ಖಾನ್ ಎಂದಿತ್ತು. ಅವರ ಬಳಿಯಿದ್ದ ದಾಖಲೆಗಳಲ್ಲಿ ಜನನ ದಿನಾಂಕ ಮೇ 20, 1870 ಎಂದು ನಮೂದಾಗಿತ್ತು. ಆದರೆ, ಅವರ ನಿವೃತ್ತಿ ವೇತನ ದಾಖಲೆಗಳಲ್ಲಿ ಇಸವಿ 20 ಮೇ 1878 ಎಂದು ದಾಖಲಾಗಿತ್ತು. ಸೋಮವಾರ ರಾತ್ರಿ ಅವರ ಆರೋಗ್ಯ ಹಳಿತಪ್ಪಿತು. ಜೈಪುರದ ಎಸ್ಎಂಎಸ್ ಆಸ್ಪತೆಗೆ ಅವರನ್ನು ದಾಖಲು ಮಾಡಲಾಗಿತ್ತು. ಆದರೂ ಅವರು ಬದುಕಿ ಉಳಿಯಲಾಗಲಿಲ್ಲ. ಭರತ ಖಂಡದ ಹಿರಿಯಜ್ಜನ ಆತ್ಮಕ್ಕೆ ಶಾಂತಿ ದೊರಕಲಿ.
ಹಬೀಬ್ ಯಾವ ಪರಿ ಸೂಕ್ಷ್ಮ ಮನಸ್ಸಿನ ಮತ್ತು ಭಾವುಕ ಜೀವಿಯಾಗಿದ್ದರೆಂದರೆ, ಮೇ 13ರಂದು ಜೈಪುರದಲ್ಲಿ ಸರಣಿ ಬಾಂಬ್ ಸ್ಫೋಟದಲ್ಲಿ 60ಕ್ಕೂ ಹೆಚ್ಚು ಜನ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲಿಲ್ಲ. ಕೆಲ ಸ್ವಯಂಸೇವೆ ಸಂಸ್ಥೆಗಳು ಮೇ 20ರಂದು ಅವರ ಜನ್ಮದಿನವನ್ನು ಆಚರಿಸಲು ಮುಂದೆ ಬಂದರೂ ಅವರು ಖಡಾಖಂಡಿತವಾಗಿ ನಿರಾಕರಿಸಿದರು. ಈ ಸಂದರ್ಭದಲ್ಲಿ ಹಬೀಬ್, "ನನ್ನ ಜೀವಮಾನದಲ್ಲಿ ಈ ಗುಲಾಬಿ ನಗರಿಯಲ್ಲಿ ಇಂಥ ಭಯಾನಕ ಘಟನೆಯನ್ನು ಯಾವತ್ತೂ ನೋಡಿಲ್ಲ. ಜೀವಹಾನಿಯಿಂದ ಅತೀವ ನೋವಾಗಿದೆ" ಎಂದು ಕಂಬನಿ ಮಿಡಿದಿದ್ದರು.
(ಯುಎನ್ಐ)
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications