ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಭ ರಾಶಿ ಮೇಲೆ ಕೆಟ್ಟ ಪರಿಣಾಮ ಬೀರಲಿರುವ ಗ್ರಹಣ

By Staff
|
Google Oneindia Kannada News

ಬೆಂಗಳೂರು, ಆ.18: ಪುರಾಣ ಗ್ರಂಥಗಳ ಪ್ರಕಾರ, ಚಂದ್ರನನ್ನು ರಾಹು ನುಂಗಿದಾಗ ಸಂಭವಿಸುವ ಚಂದ್ರಗ್ರಹಣ ಸಮಾಜ ಹಾಗೂ ಜನರ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಖ್ಯಾತ ಜ್ಯೋತಿಷಿ ಎಸ್.ಕೆ.ಜೈನ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಸಂಭವಿಸಿದ ಸೂರ್ಯಗ್ರಹಣ ನಂತರ ಅಮರನಾಥ ಭೂ ವಿವಾದ ಭುಗಿಲೆದ್ದದ್ದು ಹಾಗೂ ಈ ಹಿಂದೆ ರಾಜಕುಮಾರಿ ಡಯಾನ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು,ಸುನಾಮಿ ಸಂಭವಿಸಿದ್ದು ಎಲ್ಲಾ ಚಂದ್ರಗ್ರಹಣ ಆದ ನಂತರವೇ ಎಂದು ಅವರು ಉದಾಹರಿಸಿದರು.

ಸೂರ್ಯಗ್ರಹಣ ಹಾಗೂ ಚಂದ್ರಗ್ರಣ ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವುದು ಬಹಳ ಅಪರೂಪದ ಘಟನೆ. ಮಹಾಭಾರತದ ಯುದ್ಧ ನಡೆಯುವುದಕ್ಕೂ ಮುನ್ನ ಇವೆರಡೂ ಗ್ರಹಣಗಳು ಸಂಭವಿಸಿದ್ದವು. ಆ.1ರಂದು ಸಂಭವಿಸಿದ ಸೂರ್ಯಗ್ರಹಣ ನಂತರ ಅಂದರೆ 15 ದಿನಗಳ ಅಂತರದಲ್ಲಿ ಭಾನುವಾರ ಚಂದ್ರಗ್ರಹಣ ಸಂಭವಿಸಿದೆ. ಅದರ ಪರಿಣಾಮ ಯಾವ ಯಾವ ರಾಶಿಯ ಮೇಲೆ ಹೇಗೆ ಉಂಟಾಗುತ್ತದೆ ಎಂಬುದನ್ನು ಅವರು ತಿಳಿಸಿದರು.

ಚಂದ್ರಗ್ರಹಣವು ಕುಂಭ ರಾಶಿಯಲ್ಲಿ ಸಂಭವಿಸಿರುವುದರಿಂದ ಅದರ ಪ್ರಭಾವ ಸೂರ್ಯ,ಬುಧ,ಶುಕ್ರ,ಶನಿ,ಕೇತು,ರಾಹು ಮತ್ತು ಚಂದ್ರ ಗ್ರಹಗಳ ಮೇಲೆ ಉಂಟಾಗಲಿದೆ.

ಹಾಗೆಯೇ ಮೇಷ,ಮಿಥುನ,ಸಿಂಹ ಮತ್ತು ತುಲಾ ರಾಶಿಗಳ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ವೃಷಭ,ಧನುಸ್ಸು ಹಾಗೂ ಮಕರ ರಾಶಿಗಳ ಮೇಲೆ ಚಂದ್ರಗ್ರಹಣ ಯಾವುದೇ ಪ್ರಭಾವ ಬೀರುವುದಿಲ್ಲ. ಕುಂಭ,ಕನ್ಯಾ,ವೃಶ್ಚಿಕ ಮತ್ತು ಮೀನ ರಾಶಿಗಳ ಮೇಲೆ ಋಣಾತ್ಮಕ ಪರಿಣಾಗಳು ಉಂಟಾಗುವುದಾಗಿ ಎಸ್.ಕೆ.ಜೈನ್ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X