ನೀರಕಟ್ಟೆ ಪ್ರವಾಹಕ್ಕೆ ಕೊಚ್ಚಿ ಹೋದ 6 ಮಂದಿ
ಉಪ್ಪಿನಂಗಡಿ,ಆ.13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು ಉಪ್ಪಿನನಗಂಡಿ ಸಮೀಪ ನೀರಕಟ್ಟೆ ಆಣೆಕಟ್ಟು ಪ್ರವಾಹದಲ್ಲಿ ಆರು ಮಂದಿ ಬುಧವಾರ ಬೆಳಗಿನ ಜಾವ ಕೊಚ್ಚಿ ಹೋಗಿದ್ದಾರೆ.
ನೀರಿನಲ್ಲಿ ಕೊಚ್ಚಿ ಹೋದವರಿಗಾಗಿ ಪೊಲೀಸರು ತೀವ್ರವಾಗಿ ಶೋಧಿಸುತ್ತಿದ್ದು ಇದುವರೆಗೂ ಮೂವರ ಮೃತ ದೇಹಗಳು ಪತ್ತೆಯಾಗಿದೆ. ಉಳಿದ ಮೂರು ಮಂದಿ ಪತ್ತೆಗಾಗಿ ಶೋಧ ಮುಂದುವರಿದಿದೆ. ಪೊಲೀಸ್ ಮೂಲಗಳ ಪ್ರಕಾರ, ಭಾರೀ ಮಳೆ ಸುರಿಯುತ್ತಿರುವ ಕಾರಣ ಪ್ರವಾಹ ಉಂಟಾಗಿ ಸಾಗರ ಜಲ ವಿದ್ಯುತ್ ಘಟಕದ ಗೋಡೆ ಬಿರುಕು ಬಿಟ್ಟ ಕಾರಣ ರಭಸವಾಗಿ ನುಗ್ಗಿದ ನೀರಿನಲ್ಲಿ ಆರು ಮಂದಿ ಕೊಚ್ಚಿ ಹೋಗಿರುವುದಾಗಿ ತಿಳಿಸಿದರು.
ನೀರಿನಲ್ಲಿ ಕೊಚ್ಚಿಕೊಂಡು ಹೋದವರೆಲ್ಲಾ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯವರು. ಇಲ್ಲಿನ ಜಲ ವಿದ್ಯುತ್ ಘಟಕದಲ್ಲಿ ಇವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. 1923 ರಲ್ಲಿ ಕೂಡ ಪ್ರವಾಹ ಉಂಟಾಗಿ ಉಪ್ಪಿನಂಗಡಿ ನಗರ ಸಂಪೂರ್ಣ ಜಲಾವೃತಗೊಂಡಿತ್ತು. ಆಗ ಪ್ರಮುಖ ಕಚೇರಿಗಳನ್ನು ಪುತ್ತೂರಿಗೆ ವರ್ಗಾಯಿಸಲಾಗಿತ್ತು.
(ದಟ್ಸ್‌ಕನ್ನಡ ವಾರ್ತೆ)
ಪ್ರಮುಖ ಜಲಾಶಯಗಳು ಭರ್ತಿ; ಎಲ್ಲೆಡೆ ಪ್ರವಾಹದ ಭೀತಿ












Click it and Unblock the Notifications