ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.15ರಂದು ಎಲ್ಲ ಐಟಿಬಿಟಿ ಕಂಪನಿಗಳಿಗೆ ರಜೆ ಕಡ್ಡಾಯ!

By Staff
|
Google Oneindia Kannada News

labour minister bachche gowdaಬೆಂಗಳೂರು, ಆ.13: ಶುಕ್ರವಾರ(ಆ.15) ಸ್ವಾತಂತ್ರ್ಯದಿನಾಚರಣೆ ಪ್ರಯುಕ್ತ ಎಲ್ಲ ಸಾಫ್ಟ್‌ವೇರ್ ಮತ್ತು ಹೊರಗುತ್ತಿಗೆ ಸಂಸ್ಥೆಗಳು(ಬಿಪಿಒ) ಕಡ್ಡಾಯವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ರಾಜ್ಯ ಕಾರ್ಮಿಕ ಸಚಿವಾಲಯ ಕಟ್ಟಾಜ್ಞೆ ವಿಧಿಸಿದೆ. ಹಾಗೆಯೇ ರಜೆ ಘೋಷಿಸದ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್ಮಿಕ ಸಚಿವ ಬಿ.ಎನ್ ಬಚ್ಚೇಗೌಡ ಎಚ್ಚರಿಸಿದ್ದಾರೆ.

ಕರ್ನಾಟಕ ಮಳಿಗೆಗಳ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ ಅನ್ವಯ ಆಗಸ್ಟ್ 15ರಂದು ಎಲ್ಲ ಕಂಪನಿ ಹಾಗೂ ಉದ್ಯಮಗಳಿಗೆ ಕಡ್ಡಾಯ ರಜೆ ಘೋಷಿಸಲಾಗಿದೆ. ಸ್ವಾತಂತ್ರ್ಯದಿನಾಚರಣೆಯಂದು ಯಾವುದೇ ಕಂಪನಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಮಗೆ ದೂರು ಬಂದರೆ ಆ ಕಂಪನಿ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಂದು ಕಾರ್ಮಿಕ ಆಯುಕ್ತ ಕೆ.ಎಸ್.ಮಂಜುನಾಥ್ ತಿಳಿಸಿದರು.

ಆಗಸ್ಟ್ 15ರಂದು ಕಡ್ಡಾಯ ರಜೆ ಘೋಷಿಸಬೇಕೆಂದು ಆದೇಶ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ಕುರಿತು ಯಾವುದೇ ಗೊಂದಲಕ್ಕೆ ಒಳಗಾಗಬಾರದೆಂದು ಕಾರ್ಮಿಕ ಇಲಾಖೆ ಈ ಆದೇಶ ನೀಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇನ್ಫೋಸಿಸ್ ಸಂಸ್ಥೆ ತಮ್ಮ ಬಿಪಿಒ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಈಗಾಗಲೇ ರಜೆ ಘೋಷಿಸಿದೆ. ಹೆಲ್‌ವೆಟ್-ಪ್ಯಾಕರ್ಡ್ ಇಂಡಿಯಾ ಹಾಗೂ ಮೈಂಡಿ ಟ್ರೀ ಕಂಪನಿಗಳು ಶುಕ್ರವಾರ ರಜೆ ಘೋಷಿಸಿವೆ. ಈ ಕಾನೂನು ಕೆಲವೊಂದು ಸಂಸ್ಕರಣ ಉದ್ಯಮಗಳಿಗೆ ಅನ್ವಯಿಸುವುದಿಲ್ಲ. ಈ ರೀತಿಯ ಕಂಪನಿಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ಆಯಾ ಕಂಪನಿಗಳ ಆಡಳಿತಕ್ಕೆ ಒಪ್ಪಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X