ರಾಜ್ಯದಲ್ಲಿ ಬಂಡವಾಳ ಹೂಡಲು ಹಿಂದುಜಾ ಉತ್ಸುಕ
ಬೆಂಗಳೂರು, ಆ.11: ಹಿಂದುಜಾ ಕಂಪನಿಗಳ ಸಮೂಹ ಕರ್ನಾಟಕದ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ 1000 ಕೋಟಿ ರು.ಗಳ ಬಂಡವಾಳ ತೊಡಗಿಸಲು ಉತ್ಸುಕವಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ವಿದ್ಯುಚ್ಛಕ್ತಿ ಉತ್ಪಾದನೆ, ವಿಮಾನ ನಿಲ್ದಾಣಗಳ ನಿರ್ಮಾಣ ಮತ್ತು ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಬಂಡವಾಳ ಹೂಡುವುದಾಗಿ ಹಿಂದುಜಾ ಸಮೂಹದ ಭಾರತ ಅಧ್ಯಕ್ಷ ಅಶೋಕ್ ಪಿ ಹಿಂದುಜಾ ಹಾಗೂ ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಧೀರಜ್ ಹಿಂದುಜಾ ತಿಳಿಸಿದ್ದಾರೆ.
ಹಿಂದೂಜಾ ಗ್ರೂಪ್ ಕರ್ನಾಟಕದಲ್ಲಿ ವಿದ್ಯುತ್, ಪ್ರವಾಸೋದ್ಯಮ ಹಾಗೂ ಹಲವಾರು ಉದ್ಯಮಗಳ ಸ್ಥಾಪನೆಗೆ ಮುಂದಾಗಿರುವುದುನ್ನು ಸ್ವಾಗತಿಸಿರುವ ಮುಖ್ಯಮಂತ್ರಿಗಳು ಅದಕ್ಕೆ ಬೇಕಾಗುವ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲು ಸರ್ಕಾರ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಹಾಗೆಯೇ ಯಲಹಂಕ ಬಳಿ ಹಿಂದೂಜಾ ಗ್ರೂಪ್ ಒಡೆತನಕ್ಕೆ ಸೇರಿದ ಜಮೀನಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರ ನಿರ್ಮಿಸಲಿದೆ. ಈ ಯೋಜನೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ಶೀಘ್ರದಲ್ಲೇ ಹಿಂದುಜಾ ಗ್ರೂಪ್‍ನ ಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳನ್ನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications