ಬಿಂದ್ರಾಗೆ ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿ
ನವದೆಹಲಿ, ಆ. 11 : ಬೀಜಿಂಗ್ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಅಭಿನವ್ ಬಿಂದ್ರಾ ಅವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮುಕ್ತಕಂಠದಿಂದ ಪ್ರಶಂಸೆ ಮಾಡಿದ್ದಾರೆ.
ಅಭಿನವ್ ಬಿಂದ್ರಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಕಚೇರಿಯಿಂದ ಪತ್ರವನ್ನು ರವಾನಿಸಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಭಾರತದ ಕೀರ್ತಿ ಪಾತಾಕೆಯನ್ನು ಹಾರೈಸಿರುವ ಅಭಿನವ್ ಬಿಂದ್ರಾ ಅಭಿನಂದಿಸಿ ಶುಭ ಕೋರಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಬೇಟೆಯಾಡಿದ ಬಂಗಾರದ ಹುಡುಗನ ಸಾಧನೆಗೆ ಹೆಮ್ಮೆವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್ ನಲ್ಲಿ ಬಂಗಾರ ಪದಕ ಗೆಲ್ಲಬೇಕು ಎನ್ನುವ ಭಾರತೀಯರ ಆಸೆಯನ್ನು ಅಭಿನವ್ ಈಡೇರಿಸಿದ್ದಾನೆ. ಆತನಿಗೆ ಒಳ್ಳೆಯದಾಗಲಿ ಎಂದು ಉಭಯ ನಾಯಕರು ಹರಿಸಿದ್ದಾರೆ. 1980ರಲ್ಲಿ ಹಾಕಿಗೆ ಚಿನ್ನ ಮತ್ತು 2004ರ ಒಲಿಂಪಿಕ್ಸ್ ನಲ್ಲಿ ರಾಜ್ಯವರ್ಧನ ಸಿಂಗ್ ರಾಥೋಡ್ ಬೆಳ್ಳಿ ಪದಕ ಗೆದ್ದಿರುವುದು ಇಲ್ಲಿಯವರೆಗಿನ ಭಾರತೀಯ ಕ್ರೀಡಾಪಟುಗಳ ಶ್ರೇಷ್ಠ ಸಾಧನೆಯಾಗಿತ್ತು. ಕಳೆದ ಸಲದ ಶೂಟಿಂಗ್ ಚಾಂಪಿಯನ್ ಚೀನಾ ಜೂ. ಕಿನಾನ್ ಅವರನ್ನು ಸೋಲಿಸುವ ಮೂಲಕ ಅಭಿನವ್ ಬಿಂದ್ರಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಅಭಿನವ್ ಬಿಂದ್ರಾ ಒಲಿಂಪಿಕ್ಸ್ ದ ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಅಭಿಮಾನಿಗಳಿಂದ ಹಾರೈಕೆಯ ಮಹಾಪೂರವೇ ಹರಿದು ಬರತೊಡಗಿದೆ. ಅಪಾರ ಪ್ರಮಾಣದ ಹಣವೂ ಬಿಂದ್ರಾ ಪಾಲಾಗಲಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ ಪದಕ ಗಳಿಸಿದ ಆಟಗಾರರಿಗೆ ಒಂದು ಕೋಟಿ ರುಪಾಯಿಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಹಾಗೂ ಅಭಿನವ್ ಬಿಂದ್ರಾ ಅವರಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ತಲಾ 10 ಲಕ್ಷ ರುಪಾಯಿಗಳ ಬಹುಮಾನ ಘೋಷಿಸಿದೆ. ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಇಲಾಖೆ ವತಿಯಿಂದ ಬಿಂದ್ರಾ ಅವರಿಗೆ ಗೋಲ್ಡನ್ ಪಾಸ್ ನೀಡುವುದಾಗಿ ಹೇಳಿದ್ದಾರೆ. ಇದರ ಜತೆಗೆ ಅನೇಕ ಕಾರ್ಪೋರೇಟ್ ಕಂಪನಿಗಳ ಕಣ್ಣು ಬಿಂದ್ರಾ ಮೇಲೆ ಬಿದ್ದಿದೆ. ಚಿನ್ನದ ಪದಕದ ಗೆದ್ದಿರುವ ಬಿಂದ್ರಾ ಅಪಾರ ಧನಕನಕವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ
(ದಟ್ಸ್ ಕನ್ನಡ ವಾರ್ತೆ)
ಒಲಿಂಪಿಕ್ಸ್ : ಮೊದಲ ಸುತ್ತಿನಲ್ಲೇ ಹೊರಬಿದ್ದ ಸಾನಿಯ
ಒಲಿಂಪಿಕ್ಸ್ : ಭಾರತದ ಅಭಿನವ್ ಬಿಂದ್ರಾಗೆ ಬಂಗಾರ
ಬೀಜಿಂಗ್ ಒಲಿಂಪಿಕ್ಸ್: ಕ್ವಾರ್ಟರ್ ಪೈನಲ್ ಗೆ ಸೈನಾ












Click it and Unblock the Notifications