ನಾಡಿನ ಸ್ವಾತಂತ್ಯ್ರಹೋರಾಟಗಾರರಿಗೆ ಚಹಾ ಕೂಟ
ನವದೆಹಲಿ, ಆ. 11: ಭಾರತ ಸ್ವಾತಂತ್ರ್ಯ ಸಮರದಲ್ಲಿ ಹೋರಾಡಿದ ಕರ್ನಾಟಕದ ಆಹ್ವಾನಿತ ಹೋರಾಟಗಾರರನ್ನು ಇಲ್ಲಿನ ಕರ್ನಾಟಕಭವನದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರ ಆಹ್ವಾನದ ಮೇರೆಗೆ ದೆಹಲಿಗೆ ಆಗಮಿಸಿರುವ ರಾಜ್ಯದ ಹೋರಾಟಗಾರರಿಗೆ ಶನಿವಾರ ಕರ್ನಾಟಕ ಭವನ ಗೃಹ ಆಯುಕ್ತ(resident commissioner) ಅರವಿಂದ ರಿಷ್ ಬುದ್ ಅವರು ಚಹಾಕೂಟವನ್ನು ಏರ್ಪಡಿಸಿದ್ದರು. ಈ ಚಹಾ ಕೂಟದಲ್ಲಿ ರಾಜ್ಯದ ಎಂ.ಎಸ್.ಹುಚ್ಚುರಾಯಪ್ಪ, ಬಿ. ಶಂಭು ಶೆಟ್ಟಿ, ಚನ್ನಪ್ಪ ಗೌಡ, ಸಿ.ಎಂ.ಫಾಲಾಕ್ಷಪ್ಪ ಹಾಗೂ ಅರುಲ್ ದಾಸ್ ಅವರು ಪಾಲ್ಗೊಂಡಿದ್ದರು. ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ಈ ಮಹನೀಯರುಗಳು ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನಡಚಿತ್ರವಾರ್ತೆ)












Click it and Unblock the Notifications