ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಗಾರಿಕೆ ರಾಷ್ಟ್ರೀಕರಣಕ್ಕೆ ಹೈಕೋರ್ಟ್ ಸೂಚನೆ

By Staff
|
Google Oneindia Kannada News

ಬೆಂಗಳೂರು, ಆ. 8 : ರಾಜ್ಯದ 36 ಕಡೆ ಖಾಸಗಿ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿ 2003ರಲ್ಲಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಮಾಡಬಾರದು ಎಂದು ಕಟ್ಟಾಜ್ಞೆ ವಿಧಿಸಿದೆ.

ಈ ತೀರ್ಪಿನಿಂದ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಗಣಿಗಾರಿಕೆಗೆ ನ್ಯಾಯಲಯ ತಡೆ ಹಾಕಿದೆ. ದೇಶದ ಅನೇಕ ಕಡೆ ಅವ್ಯಾಹತವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಗ್ಗೂಡಿ ಕಾನೂನು ರೂಪಿಸಬೇಕಾಗಿದೆ. ಅರಣ್ಯ ಸೇರಿದಂತೆ ಪ್ರಾಕೃತಿಕ ಸಂಪನ್ಮೂಲ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಗಣಿಗಾರಿಕೆಯ ಮೇಲೆ ಹಿಡತ ಸಾಧಿಸಬೇಕಾಗಿದೆ. ಅದಕ್ಕಾಗಿ ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್ ಅವರಿದ್ದ ಏಕಪೀಠ ಸರ್ಕಾರಕ್ಕೆ ಸೂಚನೆ ನೀಡದೆ.

ಅರಣ್ಯ ಸಂಪತ್ತು ದೇಶದ ಅಮೂಲ್ಯ ಆಸ್ತಿ. ಇದರ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಜತೆಗೆ ನೈಸರ್ಗಿಕ ಪ್ರಕೋಪಗಳೂ ಉಂಟಾಗುತ್ತವೆ. ಆದ್ದರಿಂದ ಆರಣ್ಯ ಸಂರಕ್ಷಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ, ನಾಶ ಮಾಡಲು ಮುಂದಾಗಬೇಡಿ ಎಂದು ಸರ್ಕಾರಕ್ಕೆ ನ್ಯಾಯಲಯ ನಿರ್ದೇಶನ ನೀಡಿದೆ.

ಬಳ್ಳಾರಿ, ಸಂಡೂರು, ಕುಮಾರಸ್ವಾಮಿ ರೇಂಜ್, ರಾಮದುರ್ಗ ರೇಂಜ್, ದೋಣಿ ಮಲೈ ರೇಂಜ್, ಕೂಡ್ಲಗಿ, ಹೊಸಪೇಟೆ, ಕೋಲಾರ ಜಿಲ್ಲೆಯ ಮಾಲೂರು, ಮುಳುಬಾಗಿಲು, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ, ದೊಡ್ಡಬಳ್ಳಾಪುರ, ನೆಲಮಂಗಲ, ಮಾಗಡಿ, ಮೈಸೂರು, ಎಚ್.ಡಿ.ಕೋಟೆ, ಮಂಡ್ಯ, ನಂಜನಗೂಡು, ಮಳವಳ್ಳಿ, ಮದ್ದೂರು ಪ್ರದೇಶಗಳಲ್ಲಿ ಖಾಸಗಿ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ಸರ್ಕಾರ ಅನುಮತಿ ನೀಡಿತ್ತು.

(ದಟ್ಸ್ ಕನ್ನಡ ವಾರ್ತೆ)

ಆಗಸ್ಟ್ ಅಂತ್ಯಕ್ಕೆ ಗಣಿ ಅವ್ಯವಹಾರದ ವರದಿ ಸಲ್ಲಿಕೆ
ಅಕ್ರಮ ಗಣಿ ವ್ಯವಹಾರ : ಗಣಿಧಣಿಗಳಿಗೆ ನೋಟೀಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X