• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶೇಷ ಚೇತನರಿಗೆ ಮಾರ್ಗದರ್ಶಿಯ ಸ್ನೇಹ ಮಿಲನ

By Staff
|

ಬೆಂಗಳೂರು, ಆ.8: ಸಮಾಜದಲ್ಲಿ ವಿಕಲಚೇತನರಾದವರು ಸ್ವತಂತ್ರ ಜೀವನ ನಡೆಸಲು ನೆರವಾಗುತ್ತಿರುವ ಮಾರ್ಗದರ್ಶಿ ಸಂಸ್ಥೆ ಸ್ನೇಹ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ವಿಕಲಚೇತನರಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಪರಿಚಯವನ್ನು ಮಾಡಿಸುವುದು ಹಾಗೂ ಸಾರ್ವಜನಿಕರ ಸ್ನೇಹದ ಕೊಂಡಿಗಳನ್ನು ಮತ್ತಷ್ಟು ಬಲ ಪಡಿಸುವ ಉದ್ದೇಶದಿಂದ ಅಂಗವಿಕಲರಿಂದ ವಿಶೇಷ ಸಾಂಸ್ಕೄತಿಕ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ವಿಕಲಚೇತನರಿಗೆ ಸಂಸ್ಥೆ ನೆರವಾಗುತ್ತಿದೆ ಎಂದು ಮಾರ್ಗದರ್ಶಿ ಸಂಸ್ಥೆಯ ಮುಖ್ಯಸ್ಥ ಕೃಷ್ಣಮೂರ್ತಿ ತಿಳಿಸಿದರು.

1988 ರಲ್ಲಿ ಸ್ಥಾಪನೆಯಾದ ಮಾರ್ಗದರ್ಶಿ ಸಂಸ್ಥೆ ವಿಕಲಚೇತನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.ವಿಕಲಚೇತನರಿಗೆ ಅವಕಾಶ ಒದಗಿಸಿ ಅವರ ಪ್ರತಿಭೆಯನ್ನು ಹೊರತರುವಲ್ಲಿ ಮಾರ್ಗದರ್ಶಿ ಸಂಸ್ಥೆ ಯಶಸ್ವಿಯಾಗಿದೆ. ಸಮಾಜದ ವಿವಿಧ ಸಂಘ ಸಂಸ್ಥೆಗಳು ಹಾಗೂ ಆಸಕ್ತ ದಾನಿಗಳ ನೆರವಿನಿಂದ ವಿಕಲಚೇತನರಿಗೆ ಸಮಾಜದಲ್ಲಿ ಆರ್ಥಿಕ ಭದ್ರತೆ ಒದಗಿಸುವಲ್ಲಿ ಸಂಸ್ಥೆ ಮುನ್ನಡೆದಿದೆ.

ದಿನಾಂಕ: ಆಗಸ್ಟ್ 10, ಭಾನುವಾರ

ಸ್ಥಳ: ಬಿ.ಎಂ.ಶ್ರೀ.ಪ್ರತಿಷ್ಠಾನ

3 ನೇ ಮುಖ್ಯ ರಸ್ತೆ, ನರಸಿಂಹರಾಜ ಕಾಲೋನಿ

ಬೆಂಗಳೂರು-560 019

ಸಮಯ:ಬೆಳಗ್ಗೆ10 ರಿಂದ ಮಧ್ಯಾಹ್ನ 1:30 ರ ವರೆಗೆ

ಭೋಜನ:ಮಧ್ಯಾಹ್ನ 1:30 ಕ್ಕೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಎನ್. ಕೃಷ್ಣಮೂರ್ತಿ (ಎನ್.ಕೆ): 94493 42940

ಇಮೇಲ್ : marga_darshi@yahoo.co.in

ವೆಬ್ ತಾಣ: http://www.margadarshionline.com/

(ದಟ್ಸ್ ಕನ್ನಡ ಸಭೆ ಸಮಾರಂಭ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more